ಗುವಾಹಟಿ: ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮೇಲಿನ ಅಭಿಮಾನವನ್ನು ಯುವಕ ವಿಶೇಷವಾಗಿ ವ್ಯಕ್ತಪಡಿಸಿದ್ದು, ಹಳೆಯ ಮೊಬೈಲ್ ಫೋನ್ ವ್ಯರ್ಥ ವಸ್ತುಗಳನ್ನು ಬಳಕೆ ಮಾಡಿಕೊಂಡು ಭಾವಚಿತ್ರ ರೂಪಿಸಿದ್ದಾರೆ.
ರಾಹುಲ್ ಎಂಬ ಅಭಿಮಾನಿ ಈ ವಿಶೇಷ ಫೋಟೋವನ್ನು ರಚಿಸಿದ್ದು, ಸದ್ಯ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಗುವಾಹಟಿಗೆ ಆಗಮಿಸಿದೆ. ಈ ಸಂದರ್ಭದಲ್ಲಿ ರಾಹುಲ್, ಕೊಹ್ಲಿರನ್ನು ಹೋಟೆಲ್‍ನಲ್ಲಿ ಭೇಟಿ ಮಾಡಿ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಕೊಹ್ಲಿ ಉಡುಗೊರೆಯ ಮೇಲೆ ತಮ್ಮ ಸಹಿ ಹಾಕಿ ರಾಹುಲ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
Advertisement
Making art out of old phones.
How is this for fan love! ???????? #TeamIndia @imVkohli pic.twitter.com/wnOAg3nYGD
— BCCI (@BCCI) January 5, 2020
Advertisement
ರಾಹುಲ್‍ರ ವಿಶೇಷ ಉಡುಗೊರೆಯ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಕುರಿತು ಮತನಾಡಿರುವ ರಾಹುಲ್, ಕೆಲ ತಿಂಗಳ ಹಿಂದೆ ಕೊಹ್ಲಿ ಪಂದ್ಯಕ್ಕಾಗಿ ಗುವಾಹತಿಗೆ ಆಗಮಿಸುತ್ತಾರೆ ಎಂದು ತಿಳಿಯಿತು. ಈ ವೇಳೆ ಹಳೆಯ ಮೊಬೈಲ್ ಫೋನ್ ಗಳಿಂದ ಕೊಹ್ಲಿರ ಚಿತ್ರ ರೂಪಿಸಿದೆ. ಸರಿ ಸುಮಾರು 3 ದಿನಗಳ ಕಾಲ ಇದನ್ನು ಚಿತ್ರಪಡಿಸಿದೆ. ಇದಕ್ಕೆ ಫೋನ್, ವೈರ್ ಗಳಿಂದ ರೂಪಿಸಿದ್ದೇನೆ. ಕೊಹ್ಲಿ ಭೇಟಿ ನನಗೆ ಸಂತಸ ನೀಡಿದ್ದು, ಅವರಿಂದ ಆಟೋಗ್ರಾಫ್ ಕೂಡ ಪಡೆದಿದ್ದೇನೆ ಎಂದರು.
Advertisement
ಟೀಂ ಇಂಡಿಯಾ 2020ರ ವರ್ಷದಲ್ಲಿ ಮೊದಲ ಸರಣಿಯನ್ನು ಶ್ರೀಲಂಕಾ ವಿರುದ್ಧ ಆಡುತ್ತಿದ್ದು, ಇಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಸರಣಿಗೆ ಟೀಂ ಇಂಡಿಯಾ ಪ್ರಮುಖ ಆಟಗಾರ ಶಿಖರ್ ಧವನ್, ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದು, ಧವನ್ ಫಾರ್ಮ್‍ಗೆ ಮರಳುವ ಒತ್ತಡದಲ್ಲಿದ್ದಾರೆ. 2019ರಲ್ಲಿ 12 ಟಿ20 ಪಂದ್ಯಗಳನ್ನು ಆಡಿರುವ ಧವನ್ 272 ರನ್ ಗಳನ್ನು ಮಾತ್ರ ಗಳಿಸಿದ್ದರು. 26 ವರ್ಷ ಬುಮ್ರಾ 2019ರಲ್ಲಿ ನಂ.1 ಬೌಲರ್ ಆಗಿ ಮಿಂಚಿದ್ದರು. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 6 ಸ್ಥಾನದೊಂದಿಗೆ 2009ರ ವರ್ಷವನ್ನು ಅಂತ್ಯಗೊಳಿಸಿದ್ದರು.