ಶಿವಮೊಗ್ಗ: ಅಭಿಮಾನಿಯೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಕಲ್ಲಂಗಡಿ ಹಣ್ಣಿನ ಮೇಲೆ ವಿನ್ಯಾಸಗೊಳಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ಅಕಾಲಿಕ ನಿಧನ ಹೊಂದಿದ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಜಿಲ್ಲೆಯ ಭದ್ರಾವತಿಯ ಕಲಾವಿದ ಮಹಮದ್ ಫೈಜಾನ್ ಕಲ್ಲಂಗಡಿ ಹಣ್ಣಿನ ಮೇಲೆ ತಮ್ಮ ಕಲಾ ಕೌಶಲ್ಯದ ಮೂಲಕ ಅಪ್ಪು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್‍ಕುಮಾರ್ ರಾವ್ – ಫೋಟೋ ವೈರಲ್
ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ಅವರಿಗೆ ಗೌರವ ಸಲ್ಲಿಸಲು ಕಲ್ಲಂಗಡಿ ಹಣ್ಣಿನಲ್ಲಿ ಆಕರ್ಷಕ ಕಲಾಕೃತಿಯನ್ನು ರಚಿಸಿದ್ದಾರೆ. ಕಲಾವಿದನ ಈ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಎಂದರೆ ಈ ಕಲಾಕೃತಿಗೆ ಬಣ್ಣ ಬಣ್ಣದ ವಿದ್ಯುತ್ ದೀಪ ಸಹ ಅಳವಡಿಕೆ ಮಾಡುವ ಮೂಲಕ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ- ಸಿಎಂ ಘೋಷಣೆ
ಮಹಮದ್ ಫೈಜಾನ್ ಅವರು ಸ್ಟಿಕ್ಕರ್ ಕಟಿಂಗ್ಸ್, ಬಣ್ಣ ಲೇಪನ ವೃತ್ತಿ ಜೊತೆಗೆ ಕುಂಚ ಕಲಾವಿದರಾಗಿ ಸಹ ಗುರುತಿಸಿಕೊಂಡಿದ್ದು, ತಮ್ಮಲ್ಲಿನ ಕೆತ್ತನೆಯ ಕಲಾ ಕೌಶಲ್ಯದ ಮೂಲಕ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಗಣ್ಯರ ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳಂದು ಕಲ್ಲಂಗಡಿ ಹಣ್ಣಿನಲ್ಲಿ ಅವರ ಕಲಾಕೃತಿಗಳನ್ನು ರಚಿಸಿದ್ದಾರೆ.
ಫೈಜಾನ್ ಅವರು ಕೇವಲ ಕಲ್ಲಂಗಡಿ ಹಣ್ಣು ಮಾತ್ರವಲ್ಲದೇ ಎಲೆಗಳ ಮೇಲೆ ಕಲಾಕೃತಿಗಳನ್ನು ರಚಿಸಿದ್ದಾರೆ. ಗೋಡೆಗಳ ಮೇಲೆ ಆಕರ್ಷಕವಾದ ಕುಂಚ ಕಲೆ, ವರ್ಣ ಚಿತ್ರ ಕಲೆಗಳಲ್ಲಿಯೂ ಸಹ ಪರಿಣಿತರಾಗಿದ್ದಾರೆ.