ಬಹುಭಾಷಾ ನಟ ಸೋನು ಸೂದ್ (Sonu Sood) ತೆರೆಯ ಮೇಲೆ ಅಷ್ಟೇ ಹೀರೋ ಅಲ್ಲ, ತೆರೆಯ ಹಿಂದೆ ಕೂಡ ರಿಯಲ್ ಹೀರೋ ಎಂಬುದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಕೊರೊನಾ(Corona) ಎಂಬ ಮಹಾಮಾರಿ ವಕ್ಕರಿಸಿದ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸೋನು ಸೂದ್ ಸಹಾಯ ಮಾಡಿ, ಸಾಕಷ್ಟು ಅಭಿಮಾನಿಗಳ ದಿಲ್ ಗೆದ್ದಿದ್ದರು. ಇದೀಗ ಇಂತಹ ಮಹಾನ್ ನಟನಿಗೆ ರಕ್ತದಿಂದ ಪೇಂಟಿಂಗ್ ಮಾಡಿ, ಸೋನು ಸೂದ್ಗೆ ಗಿಫ್ಟ್ ನೀಡಿದ್ದಾರೆ. ಈ ಹುಚ್ಚು ಪ್ರೀತಿ ನೋಡಿ ಸೋನು ತನ್ನ ಅಭಿಮಾನಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕನ್ನಡ ಮಾತ್ರವಲ್ಲದೇ ಬಹುಭಾಷಾ ನಟನಾಗಿ ಮಿಂಚುತ್ತಿರುವ ಸೋನು ಸೂದ್ಗೆ ಅಪಾರ ಅಭಿಮಾನಿಗಳಿದ್ದಾರೆ. ತೆರೆಯ ಮೇಲೆ ಖಳನಾಗಿ ಕಾಣಿಸಿಕೊಳ್ಳುತ್ತಿದ್ದ ಸೋನು ಅವರ ರಿಯಲ್ ನಡೆ, ನುಡಿ ಮತ್ತು ಅವರ ವ್ಯಕ್ತಿತ್ವ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಕಾವಲಾಗಿ ನಿಲ್ಲುವ ಸೋನು ಸೂದ್ ಗುಣ, ಅಭಿಮಾನಿಗಳ ಮನ ಮಿಡಿದಿದೆ. ಹೀಗಿರುವಾಗ ಅಭಿಮಾನಿಯೊಬ್ಬನ ಹುಚ್ಚು ಪ್ರೀತಿ ನೋಡಿ, ಸ್ವತಃ ಸೋನು ಸೂದ್(Sonu Sood) ಶಾಕ್ ಆಗಿದ್ದಾರೆ.
ಅಭಿಮಾನಿಯೊಬ್ಬರು, ರಕ್ತದಿಂದ ಮಾಡಿದ ವರ್ಣಚಿತ್ರವನ್ನು ಸೋನು ಸೂದ್ ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಯ ಈ ನಡೆ ನೋಡಿ ಸೋನು ಸೂದ್ ರಕ್ತವನ್ನು ದಾನ ಮಾಡಿ, ರಕ್ತದಿಂದ ನನ್ನ ಪೇಂಟಿಂಗ್ ಮಾಡೋದು ಸರಿಯಲ್ಲ. ರಕ್ತವನ್ನು ವ್ಯರ್ಥ ಮಾಡಬೇಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಅದಕ್ಕೆ ಅಭಿಮಾನಿ, ನಿಮಗಾಗಿ ಪ್ರಾಣ ತ್ಯಾಗ ಮಾಡೋದಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಪ್ರಭಾಸ್ ದೊಡ್ಡಪ್ಪ, ತೆಲುಗಿನ ಹಿರಿಯ ನಟ ಕೃಷ್ಣಂರಾಜು ನಿಧನ
प्रताबगढ के श्री माधु जी गुर्जर ने लाखो लोगो की मदद करने वाले @SonuSood जी से मुलाकात कर उनके निवास पर मित्रों संग खून से बनी हुई पेंटिंग भेंट की बहुत बहुत बधाई आपको@SonuSood @ArtMadhu pic.twitter.com/cvpUay7yKK
— Rajaram Gurjar (@BjpRajaram99) September 9, 2022
ಇನ್ನು ಅಭಿಮಾನಿಯ ಹುಚ್ಚು ಪ್ರೀತಿ ನೋಡಿ ಶಾಕ್ ಆಗಿರುವ ಸೋನು ಸೂದ್, ಆ ಅಭಿಮಾನಿಗೆ ಖಡಕ್ ಕ್ಲಾಸ್ ಮಾಡಿ, ಅವರ ಪ್ರೀತಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.