ರಾಮನಗರ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದಕ್ಕೆ ಖುಷಿಗೊಂಡ ದರ್ಶನ್ ಅಭಿಮಾನಿಯೊಬ್ಬ ಬೆನ್ನಿನ ತುಂಬ ದರ್ಶನ್ ಟ್ಯಾಟು ಹಾಕಿಸಿಕೊಂಡು ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.
ರಾಮನಗರ ತಾಲೂಕಿನ ಕರೇನಹಳ್ಳಿ ಗ್ರಾಮದ ಕಾರ್ತಿಕ್ ಎಂಬವರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿನ ನಟ ದರ್ಶನ್ ರಾಯಣ್ಣ ಗೆಟಪ್‍ನ ಚಿತ್ರವನ್ನು ಬೆನ್ನಿನ ಪೂರ್ತಿಯಾಗಿ ಹಾಕಿಸಿಕೊಂಡಿದ್ದಾರೆ. ರಾಮನಗರದ ಮಧು ಟ್ಯಾಟು ಸೆಂಟರ್ ನಲ್ಲಿ ಸೋಮವಾರ ಕಾರ್ತಿಕ್ ಟ್ಯಾಟು ಹಾಕಿಸಿಕೊಂಡಿದ್ದಾರೆ.
Advertisement
Advertisement
ನಟ ದರ್ಶನ್‍ರ ಅಭಿಮಾನಿಯಾಗಿರುವ ಕಾರ್ತಿಕ್ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಗೆದ್ದಿದ್ದಕ್ಕೆ ಖುಷಿಯಾಯಿತು. ಸುಮಲತಾ ಬೆನ್ನಿಗೆ ನಿಂತು ಚುನಾವಣೆಯ ಪ್ರಚಾರದಲ್ಲಿ ದರ್ಶನ್ ಪಾಲ್ಗೊಂಡು ಗೆಲುವಿಗೆ ಕಾರಣವಾಗಿದ್ದಕ್ಕೆ ಖುಷಿಯಾಗಿದ್ದು ಟ್ಯಾಟು ಹಾಕಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
Advertisement
ಟ್ಯಾಟು ಹಾಕಿದ ಮಧು ಸಹ ದರ್ಶನ್ ಅಭಿಮಾನಿಯಾಗಿದ್ದು, ದರ್ಶನ್ ಟ್ಯಾಟುವಿಗೆ ಶೇ 50%ರಷ್ಟು ರಿಯಾಯಿತಿ ನೀಡಿದ್ದಾರೆ. ದರ್ಶನ್ ಅವರನ್ನು ದೂರದಿಂದಲೇ ನೋಡಿದ್ದೇನೆ. ಹತ್ತಿರದಿಂದ ಒಮ್ಮೆಯಾದರೂ ನೋಡಬೇಕು ಹಾಗೂ ಮಾತನಾಡಿಸಬೇಕು ಎಂಬ ಆಸೆಯಿರುವುದಾಗಿ ಟ್ಯಾಟು ಹಾಕಿಸಿಕೊಂಡ ಕಾರ್ತಿಕ್ ತನ್ನ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.