ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಅವರ ಅಭಿಮಾನಿಯೊಬ್ಬರು ಎದೆ ಮೇಲೆ ಪುನೀತ್ ಭಾವಚಿತ್ರದ ಟ್ಯಾಟೋ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ.
ದೊಡ್ಮನೆ ಹುಡುಗ ನಟ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 12 ದಿನ ಕಳೆದಿದೆ. ಪುನೀತ್ ಇಲ್ಲ ಎಂಬ ಸತ್ಯವನ್ನು ಜನ ಈಗಲೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೆಚ್ಚಿನ ನಟ ಅಪ್ಪು ನಿಧನ ಬಳಿಕ ಅನೇಕ ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ಪುನೀತ್ ಸವಿನೆನಪಿನಲ್ಲಿ ಅನ್ನಸಂತರ್ಪಣೆ ಮಾಡಿದ್ದರೆ, ವೃದ್ಧೆಯೊಬ್ಬರು ಪುನೀತ್‍ಗಾಗಿ ಮಂಡಕ್ಕಿಯಲ್ಲಿ ಹಾರ ಮಾಡಿಕೊಂಡು ಪುನೀತ್ ಸಮಾಧಿ ಬಳಿ ಆಗಮಿಸಿದ್ದರು. ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ
ಇಂದಿಗ ರಾಘವೇಂದ್ರ ವದ್ದಿ ಎಂಬ ಅಭಿಮಾನಿ ಎದೆಯ ಮೇಲೆ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಹಾಗೂ ಜೈ ರಾಜವಂಶ ಎನ್ನುವ ಟ್ಯಾಟೋವನ್ನು ಎದೆಯ ಮೇಲೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್
ಪುನೀತ್ ರಾಜ್‍ಕುಮಾರ್ ಅವರ ಚಿತ್ರಕ್ಕೆ ಮಾತ್ರವಲ್ಲದೇ ರಾಜವಂಶದ ಯಾವುದೇ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಕೂಡ ಅದ್ದೂರಿಯಾಗಿ ಸ್ವಾಗತಿಸುವ ರಾಘವೇಂದ್ರ ಅವರು, ಪುನೀತ್ ಅಗಲಿಕೆಯಿಂದ ಅವರ ನೆನಪು ಸದಾ ಹಸಿರಾಗಿರಲಿ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.