ಬೆಂಗಳೂರು: 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಸೋತಿದ್ದಕ್ಕೆ ಅಭಿಮಾನಿಯೊಬ್ಬ ಟಿವಿಯನ್ನು ಪುಡಿ ಪುಡಿ ಮಾಡಿದ್ದಾನೆ.
ನಗರದಲ್ಲಿ ಭಾನುವಾರ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ತನ್ನ ಸ್ನೇಹಿತರ ಜೊತೆ ಅಭಿಮಾನಿ ಪಂದ್ಯ ವೀಕ್ಷಿಸುತ್ತಿದ್ದನು. ಈ ಮ್ಯಾಚ್‍ನಲ್ಲಿ ಆರ್‌ಸಿಬಿ ಸೋಲುತ್ತಿದ್ದಂತೆ ಕೋಪಗೊಂಡ ಅಭಿಮಾನಿ ತನ್ನ ಕೈಯಲ್ಲಿದ್ದ ಬ್ಯಾಟ್‍ನಿಂದ ಟಿವಿಯನ್ನು ಪುಡಿ ಪುಡಿ ಮಾಡಿದ್ದಾನೆ.
Advertisement
Advertisement
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್‌ಸಿಬಿ ಸುಲಭವಾಗಿ ತುತ್ತಾಯಿತು. ಆ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಿದ ಡೆಲ್ಲಿ 4 ವಿಕೆಟ್ ಗಳೊಂದಿಗೆ ಗೆಲುವು ಪಡೆಯಿತು.
Advertisement
ಈ ಹಿಂದಿನ ಐಪಿಎಲ್ ಟೂರ್ನಿಗಳಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ಅಭಿಮಾನಿಗಳು ಹೆಚ್ಚು ಬೆಂಬಲವನ್ನು ನೀಡಿ ಪ್ರಚಾರ ಮಾಡಿದ್ದರು. ಆದರೆ ಸತತ 6 ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಎಷ್ಟೇ ಪಂದ್ಯ ಸೋತರೂ ಕೂಡ ನಮ್ಮ ಬೆಂಬಲ ನಮ್ಮ ತಂಡಕ್ಕೆ ಮಾತ್ರ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ತಂಡದ ವಿರುದ್ಧ ಟ್ರೋಲ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.