ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಮೈದಾನ ಪ್ರವೇಶಿಸಿದ ಅಭಿಮಾನಿಯೊಬ್ಬ ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಕಾಲಿಗೆ ಬಿದ್ದಿದ್ದ. ಆದರೆ ಈಗ ಬಿಗಿ ರಕ್ಷಣೆಯ ನಡುವೆಯೂ ಅಭಿಮಾನಿಯೊಬ್ಬ ಮೈದಾನಕ್ಕೆ ಪ್ರವೇಶಿಸಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದಿದ್ದಾನೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಘಟನೆ ನಡೆದಿದೆ. ಕೊಹ್ಲಿ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಕೇವಲ 40 ಎಸೆತಗಳಲ್ಲಿ 70 ರನ್ ಸಿಡಿಸಿದರು. ಈ ವೇಳೆ ಅಭಿಮಾನಿಯೊಬ್ಬ ರಕ್ಷಣಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೈದಾನದಲ್ಲಿದ್ದ ಕೊಹ್ಲಿ ಕಡೆ ಓಡಿ ಬಂದು ಕಾಲಿಗೆ ಬಿದ್ದಿದ್ದಾನೆ. ಬಳಿಕ ಎಚ್ಚೆತ್ತ ರಕ್ಷಣಾ ಸಿಬ್ಬಂದಿ ಅಭಿಮಾನಿಯನ್ನು ತಡೆಯಲು ಯತ್ನಿಸಿದರು. ಆದರೆ ಕೊಹ್ಲಿ ಅಭಿಮಾನಿಯ ಆಸೆಯಂತೆ ಸೆಲ್ಫಿಗೆ ಫೋಸ್ ನೀಡಿದರು.
Advertisement
Advertisement
ಪಂದ್ಯದಲ್ಲಿ ಆರ್ ಸಿಬಿ ಪರ ಉತ್ತಮ ಜೊತೆಯಾಟ ನೀಡಿದ ನಾಯಕ ಕೊಹ್ಲಿ ಹಾಗೂ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ (37 ಎಸೆತ, 72 ರನ್) ತಂಡದ ಗೆಲುವಿಗೆ ಕಾರಣರಾದರು. ಕೇವಲ 64 ಎಸೆತಳನ್ನು ಎದುರಿಸಿದ ಈ ಜೋಡಿ 118 ರನ್ ಸಿಡಿಸಿದರು.
Advertisement
ಸರಣಿಯಲ್ಲಿ ಸತತ ಸೋಲುಗಳ ಮೂಲಕ ನಿರಾಸ ಪ್ರದರ್ಶನ ನೀಡಿದ ಆರ್ ಸಿಬಿ ತಂಡದ ಡೆಲ್ಲಿ ವಿರುದ್ಧ ಗೆಲುವಿನ ಬಳಿಕ ಆಡಿರುವ 11 ಪಂದ್ಯದಲ್ಲಿ 4 ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದೆ.
Advertisement
https://www.instagram.com/p/BisFZAvH-OV/?utm_source=ig_embed