ಖ್ಯಾತ ಯೂಟ್ಯೂಬರ್ ಆ್ಯಂಗ್ರಿ ರ‍್ಯಾಂಟ್‌ಮ್ಯಾನ್ (Angry Rantman) ಅಲಿಯಾಸ್ ಅಭ್ರದೀಪ್ ಸಾಹಾ (Abhradeep Saha) ತಮ್ಮ 27ನೇ ವಯಸ್ಸಿಗೆ ನಿಧನರಾಗಿದ್ದಾರೆ. ‘ಕೆಜಿಎಫ್’ (KGF) ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಯೂಟ್ಯೂಬ್‌ನಲ್ಲಿ 4.8 ಲಕ್ಷ ಫಾಲೋವರ್ಸ್ ಹೊಂದಿದ್ದರು. ಅವರ ನಿಧನದ ಸುದ್ದಿ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾದಲ್ಲಿ ಸಿದ್ಧಾರ್ಥ್
Advertisement
ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಅಬ್ರದೀಪ್ ಸಾಹಾ, ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೂ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ವೆಂಟಿಲೇಟರ್ ಸಹಾಯದಲ್ಲಿದ್ದರು. ಆದರೆ ಏಪ್ರಿಲ್ 16ರ ರಾತ್ರಿ ಅಧಿಕೃತವಾಗಿ ಅವರ ಸಾವಿನ ಸುದ್ದಿ ಹೊರಬಿದ್ದಿದೆ.
Advertisement
Only Angry Rantman fan are allowed to liking this post……
One of my fav YouTuber ❤️❤️
Gone too soon 💔💔
RIP 🙏🏻🙏🏻#AngryRantman REST IN PEACE
यह क्या है भाई pic.twitter.com/chXODTPsSA
— Neku Nagauri {Nek Sa} (@NekuNagauri3) April 17, 2024
Advertisement
ಅಬ್ರದೀಪ್ ಬಹು ಅಂಗಾಂಗಳ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಸರ್ಜರಿ ಕೂಡ ಮಾಡಲಾಗಿತ್ತು. ಸರ್ಜರಿ ಬಳಿಕ ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ, ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಏ.16ರ ರಾತ್ರಿ ನಿಧನರಾಗಿದ್ದಾರೆ.
Advertisement
ರಾಜಕೀಯ, ಕ್ರಿಕೆಟ್, ಸಿನಿಮಾ, ತಿನಿಸುಗಳ ಬಗ್ಗೆ ರಿವ್ಯೂ ಹೇಳುವ ಮೂಲಕ ಅಭ್ರದೀಪ್ ಗಮನ ಸೆಳೆದಿದ್ದರು. ಅದರಕ್ಕೂ ಕೆಜಿಎಫ್ ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಹೇಳಿದ್ದರು. ಯಶ್ ನಟನೆಯನ್ನು ಹಾಡಿಹೊಗಳಿದ್ದರು. ಆ ವಿಡಿಯೋ 17 ಲಕ್ಷ ವಿವ್ಸ್ ಪಡೆದಿತ್ತು. ಯೂಟ್ಯೂಬ್‌ನಲ್ಲಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದರು.