Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು

Public TV
2 Min Read
FotoJet 109

ಪ್ರತಿ ವರ್ಷವೂ ಬಿಗ್ ಬಾಸ್ (Bigg Boss Season 9) ಮನೆಯಲ್ಲಿರುವ ಸದಸ್ಯರಲ್ಲಿ ಅತೀ ಹೆಚ್ಚು ಕಿರುತೆರೆಯ ಲೋಕದವರೇ ಇರುತ್ತಾರೆ. ಈ ಬಾರಿಯೂ ಅದಕ್ಕೆ ಹೊರತಾಗಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾದ ನಾನಾ ಧಾರಾವಾಹಿಗಳ ಫೇಮಸ್ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ತಾರೆಯರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದೂ ಹೇಳಲಾಗಿತ್ತು. ಯಾರೆಲ್ಲ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎನ್ನುವುದು ಇವತ್ತಷ್ಟೇ ಗೊತ್ತಾಗಲಿದೆ. ಅದಕ್ಕೂ ಮುನ್ನ ಕೆಲವು ಹೆಸರುಗಳು ಹರಿದಾಡುತ್ತಿವೆ.

FotoJet 4 15

ನೇಹಾ ಗೌಡ (ಲಕ್ಷ್ಮಿ ಬಾರಮ್ಮ)

ಆರು ವರ್ಷಗಳ ಅಧಿಕ ಕಾಲ ಪ್ರಸಾರವಾದ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆ ಅಂತಾನೇ ಫೇಮಸ್ ಆಗಿರುವ ನಟಿ ನೇಹಾ ಗೌಡ (Neha Gowda). ಈ ಬಾರಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ಹೆಸರಾಂತ ನಟಿ ಸೋನು ಗೌಡ ಅವರ ಸಹೋದರಿ ಕೂಡ ಇವರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ಮದುವೆ ಆಗಿರುವ ನೇಹಾ ಗೌಡ, ಇದೀಗ ಧಾರಾವಾಹಿ ಲೋಕದಲ್ಲಿ ಅಷ್ಟೇನೂ ಸಕ್ರಿಯರಾಗಿಲ್ಲವಾದರೂ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರಿಂದ, ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

FotoJet 3 40

ರಮೋಲಾ (ಕನ್ನಡತಿ)

ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುತ್ತಿರುವ ಕನ್ನಡತಿ (Kannadathi)ಧಾರಾವಾಹಿಯ ಸಾನಿಯಾ ಪಾತ್ರದ ಮೂಲಕ ಫೇಮಸ್ ಆದವರು ರಮೋಲಾ. ಈ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ. ಅದೊಂದು ನೆಗೆಟಿವ್ ಪಾತ್ರವಾದರೂ, ರಮೋಲಾ (Ramola) ಒಪ್ಪಿಕೊಂಡು ಪಾತ್ರ ನಿರ್ವಹಿಸಿದ ರೀತಿ ಮೆಚ್ಚುವಂಥದ್ದು. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದರೂ, ಈವರೆಗೂ ಒಂದೂ ಸಿನಿಮಾ ಬಿಡುಗಡೆ ಆಗಿಲ್ಲ. ಮೊನ್ನೆಯಷ್ಟೇ ಕನ್ನಡತಿ ಧಾರಾವಾಹಿಯಿಂದ ಈ ನಟಿ ಹೊರ ನಡೆದಿದ್ದರು. ಇದು ಬಿಗ್ ಬಾಸ್ ಮನೆಗೆ ಹೋಗುವ ಕಾರಣಕ್ಕಾಗಿಯೇ ಆದ ಘಟನೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಸದ್ಯ ಫ್ಯಾಷನ್ ಡಿಸೈನ್ ಕೋರ್ಸ್ ಕೂಡ ಮಾಡುತ್ತಿದ್ದಾರೆ ರಮೋಲಾ.

FotoJet 2 73

ಕಾವ್ಯಶ್ರೀ ಗೌಡ (ಮಂಗಳಗೌರಿ ಮದುವೆ)

ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಮಂಗಳಗೌರಿಯಾಗಿ ನಟಿಸಿದವರು ಕಾವ್ಯಶ್ರೀ ಗೌಡ (Kavyashree Gowda). ಕಥಾನಾಯಕಿಯ ಪಾತ್ರವೇ ಅದಾಗಿದ್ದರಿಂದ ಅತೀ ಬೇಗ ಜನರಿಗೆ ಹತ್ತಿರವಾದರು. ನಿರೂಪಕಿಯಾಗಿಯೂ ಕೆಲಸ ಮಾಡಿರುವ ಕಾವ್ಯಶ್ರೀ, ಮೂಲತಃ ಚನ್ನಪಟ್ಟಣದವರು. ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕಾವ್ಯಶ್ರೀ, ಇದೀಗ ಬಿಗ್ ಬಾಸ್ ಮನೆಯನ್ನೂ ಪ್ರವೇಶ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ ಅದು ಕನಸಾಗಿಯೇ ಉಳಿಯಿತು.

FotoJet 1 81

ಅಮೂಲ್ಯ ಗೌಡ (ಕಮಲಿ)

ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ಚಿರಪರಿಚಿತ ಹೆಸರು ಅಮೂಲ್ಯ ಗೌಡ (Amulya Gowda) ಅವರದ್ದು. ಕನ್ನಡದ ಪ್ರೇಕ್ಷಕರಿಗೆ ಕಮಲಿ (Kamali) ಆಗಿಯೇ ಪರಿಚಯವಾದವರು. ಅದೊಂದು ಸಾಂಪ್ರದಾಯಿಕ ಹುಡುಗಿಯ ಪಾತ್ರವಾಗಿದ್ದರಿಂದ ನೋಡುಗರಿಗೆ ಬೇಗನೇ ಹತ್ತಿರವಾದ ನಟಿ. ಸ್ವಾತಿ ಮುತ್ತು, ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *