BollywoodCinemaCrimeLatestMain PostNational

ಪ್ಯಾರಾಚೂಟ್ ಓಪನ್ ಆಗದೇ ಸ್ಕೈಡೈವಿಂಗ್ ಮಾಡುವಾಗ ಖ್ಯಾತ ಟಿಕ್ ಟಾಕ್ ತಾರೆ ತಾನ್ಯಾ ಸಾವು

ಕೆನಡಾದ ಖ್ಯಾತ ಟಿಕ್ ಟಾಕ್ ತಾರೆ ಹಾಗೂ ಮಾಡೆಲ್ ತಾನ್ಯಾ ಪರ್ದಾಜಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅವರು ಸ್ಕೈಡೈವಿಂಗ್ ಕ್ಲಾಸಿಗೆ ಸೇರಿಕೊಂಡಿದ್ದು, ಸ್ಕೈಡೈವಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾಗ ಅನಾಹುತ ಸಂಭವಿಸಿದೆ. ಆಕಾಶದಿಂದ ನೇರವಾಗಿ ನೆಲಕ್ಕೆ ಬಿದ್ದು 21ರ ವಯಸ್ಸಿನ ತಾನ್ಯ ದುರಂತ ಅಂತ್ಯ ಕಂಡಿದ್ದಾರೆ.

ತಾನ್ಯಾ ಪರ್ದಾಜಿ ಒಬ್ಬರೇ ಸ್ಕೈಡೈವಿಂಗ್ ಅಭ್ಯಾಸ ಮಾಡುವಾಗ ತಡವಾಗಿ ಪ್ಯಾರಾಚೂಟ್ ಓಪನ್ ಮಾಡಿದ ಹಿನ್ನೆಲೆಯಲ್ಲಿ ಪ್ಯಾರಾಚೂಟ್ ಗೆ ಗಾಳಿ ತುಂಬಿಕೊಳ್ಳದೇ ಆಕಾಶದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಆಗಸ್ಟ್ 27 ರಂದು ಕೆನಡಾದ ಒಂಟಾರಿಯೋದಲ್ಲಿ ಈ ದುರಂತ ನಡೆದಿದ್ದು, ಸ್ಕೈಡೈವಿಂಗ್ ತರಬೇತಿ ಸಂಸ್ಥೆಯ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

ತಾನ್ಯ ಪರ್ದಾಜಿ  ಕೇವಲ ಟಿಕ್ ಟಾಕ್ ತಾರೆ ಮಾತ್ರ ಆಗಿರಲಿಲ್ಲ. ಮಾಡೆಲಿಂಗ್ ನಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ಲದೇ, 2017ರಲ್ಲಿ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಸೆಮಿ ಫೈನಲಿಸ್ಟ್ ಕೂಡ ಆಗಿದ್ದವರು. ಸ್ಕೈಡೈವಿಂಗ್ ಮೇಲಿನ ಆಸಕ್ತಿಯಿಂದಾಗಿ ಇತ್ತೀಚೆಗಷ್ಟೇ ಅವರು ಕ್ಲಾಸಿಗೆ ಸೇರಿಕೊಂಡಿದ್ದರು ಎಂದಿದೆ ಸಂಸ್ಥೆ.

Live Tv

Leave a Reply

Your email address will not be published.

Back to top button