‘ತೂತು ಮಡಿಕೆ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಮಧುಸೂದನ್ ರಾವ್ (Madhusudan Rao) ಬಿಗ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ‘ಸನ್ನಿದಾನ ಪಿ.ಒ’ ಎಂದು ಶೀರ್ಷಿಕೆ ಇಡಲಾಗಿದ್ದು ಜನವರಿ 14 ಸಂಕ್ರಾಂತಿಯಂದು ಸಿನಿಮಾ ಶಬರಿ ಮಲೆಯ ಸನ್ನಿದಾನದಲ್ಲಿ ಸೆಟ್ಟೇರಲಿದೆ.
‘ಸನ್ನಿದಾನ ಪಿ.ಒ’ ಚಿತ್ರ ಡಿವೈನ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡಿದ್ದು, ಮಲಯಾಳಂ ನಿರ್ದೇಶಕ ರಾಜೀವ್ ವೈದ್ಯ (Rajeeva Vaidya) ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಜನವರಿ 14ರಂದು ಸಿನಿಮಾ ಸೆಟ್ಟೇರಲಿದೆ. ತಮಿಳಿನ ಖ್ಯಾತ ನಟ ಯೋಗಿ ಬಾಬು (Yogi Babu), ಸ್ಯಾಂಡಲ್ ವುಡ್ ಪ್ರತಿಭಾವಂತ ಕಲಾವಿದ ಪ್ರಮೋದ್ ಶೆಟ್ಟಿ (Pramod Shetty) ಚಿತ್ರದ ತಾರಾಬಳಗದಲ್ಲಿದ್ದಾರೆ. ಸೌತ್ ಸಿನಿ ದುನಿಯಾದ ಸ್ಟಾರ್ ನಟ ಹಾಗೂ ನಟಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದು, ಸದ್ಯದಲ್ಲೇ ಚಿತ್ರದ ತಾರಾ ಬಳಗ, ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಹಂಚಿಕೊಳ್ಳೋದಾಗಿ ನಿರ್ಮಾಪಕ ಮಧುಸುಧನ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗೆಳೆಯ ವಸಿಷ್ಠ ಸಿಂಹಗೆ ವಿಭಿನ್ನವಾಗಿ ವಿಶ್ ಮಾಡಿದ ಡಾಲಿ ಧನಂಜಯ್
ಸರ್ವತ ಸಿನಿ ಗ್ಯಾರೇಜ್, ಶಿಮೊಗ್ಗ ಕ್ರಿಯೇಷನ್ಸ್ ಬ್ಯಾನರ್ ಜೊತೆಗೂಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಧುಸುಧನ್ ರಾವ್ ಹಾಗೂ ಶಬೀರ್ ಪಠಾನ್ ಈ ಬಿಗ್ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k