ಉಡುಪಿ: ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಜಿಲ್ಲೆಯ ರಥಬೀದಿಯ ಸುತ್ತಮುತ್ತ ಎರಡು ದಿನ ಸುತ್ತಿ, ವೇಷ ಮತ್ತು ಆಚರಣೆಗಳನ್ನು ಫೇಮಸ್ ಫೋಟೋಗ್ರಾಫರ್ ಒಬ್ಬರು ಈ ಬಾರಿ ಡಿಫರೆಂಟಾಗಿ ಫೋಕಸ್ ಮಾಡಿದ್ದಾರೆ.
Advertisement
ಫೋಟೋಗ್ರಾಫರ್ ರಾಘವೇಂದ್ರ ಕೊಡಂಗಳ ಅವರು ಶ್ರೀಕೃಷ್ಣ ಗೋಪಿಕೆಯರಿಗೆ ಬಿಡುತ್ತಿದ್ದ ಪೆಟ್ನೋಲಿ ಮಾರುವ ಅಜ್ಜ ಮೊಮ್ಮಗ, ಕೃಷ್ಣನೂರಲ್ಲಿ ಹನುಮಂತ, ಬಾನಿಗೇರಿದ ಅನ್ಯಗ್ರಹ ಜೀವಿಯನ್ನು ರಾಘು ವಿಭಿನ್ನವಾಗಿ ಸೆರೆ ಹಿಡಿದಿದ್ದಾರೆ. ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೊಗಳು ಇಲ್ಲಿದೆ.
Advertisement
Advertisement
ಉಡುಪಿಯ ಮೊಸರು ಕುಡಿಕೆ ದೇಶದ ಮತ್ತೆಲ್ಲೂ ಕಾಣ ಸಿಗಲ್ಲ. ಸಾಂಪ್ರದಾಯಿಕ ಗೊಲ್ಲವೇಷಧಾರಿಗಳು ಮೊಸರು, ಹಾಲು, ಬೆಣ್ಣೆ- ಕಜ್ಜಾಯವಿದ್ದ ಕುಡಿಕೆ ಒಡೆದು ಅದನ್ನು ಕೃಷ್ಣನಿಗೆ ಕೊಡುತ್ತಾರೆ. ಮೊಸರು ಕುಡಿಕೆಯಾಗುತ್ತಿದ್ದಂತೆ ಅದನ್ನೆಲ್ಲ ಮೆಲ್ಲುತ್ತಾ ಕೃಷ್ಣ ರಥದಲ್ಲಿ ಬರುತ್ತಾನೆ. ಮೊಸರು ಕುಡಿಕೆ ಚಿತ್ರಗಳೇ ಕಲರ್ ಫುಲ್. ಅದರ ಫೋಟೋ ಕ್ಲಿಕ್ ಮಾಡೋದು ಅಷ್ಟೇ ಡೇಂಜರಸ್. ಲಕ್ಷಾಂತರ ಮೌಲ್ಯದ ಸಲಕರಣೆ ಇಟ್ಟುಕೊಂಡು ಗುರ್ಜಿಯ ಕೆಳಗೆ ನಿಲ್ಲುವುದಕ್ಕೆ ಧೈರ್ಯವೂ ಬೇಕು, ಚಾಕಚಕ್ಯತೆಯೂ ಬೇಕು. ಕೊಂಚ ಎಚ್ಚರ ತಪ್ಪಿದರೂ ಕುಡಿಕೆಯಲ್ಲಿದ್ದ ಮೊಸರು ಕ್ಯಾಮೆರಾ ಮೇಲೆ ಬೀಳುತ್ತದೆ ಅಂತ ರಾಘು ತಿಳಿಸಿದ್ರು.
Advertisement
ಕಜ್ಜಾಯ ಮತ್ತು ಮೊಸರಿನ ಮಳೆ ತರಿಸಿದ ಗೊಲ್ಲರು, ಕೃಷ್ಣನ ಪ್ರಸಾದ ಸ್ವಾಮಿಗಳ ಕೈಯಿಂದಲೇ ಪಡೆಯಬೇಕೆಂಬ ಆಸೆಯ ಕೈಗಳನ್ನು ರಾಘು ವಿಭಿನ್ನವಾಗಿ ಸೆರೆಹಿಡಿದಿದ್ದಾರೆ. ದೇಶದ ಬೇರೆ ಬೇರೆ ಭಾಗಗಳನ್ನು ಸುತ್ತುವ ರಾಘವೇಂದ್ರ, ಅಷ್ಟಮಿ ಎಲ್ಲವನ್ನು ಒಂದೇ ಕಡೆ ಕೊಡುವ ಪ್ಯಾಕೇಜ್ ಎಂದು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict