ಮಲಯಾಳಂನ ಖ್ಯಾತ ನಟ, ಇದೀಗ ಕನ್ನಡದಲ್ಲೂ ಸಿನಿಮಾ ಮಾಡುತ್ತಿರುವ ಪೃಥ್ವಿ ಸುಕುಮಾರನ್ ನಡೆಸಿದ್ದ ಕಡುವ ಸಿನಿಮಾ ದೇಶಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಆದರೆ, ಇದೇ ಸಿನಿಮಾದ ಕಾರಣಕ್ಕಾಗಿ ಪೃಥ್ವಿ ಸುಕುಮಾರನ್ ಅವರಿಗೆ ಕ್ಷಮೆ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಈ ಸಿನಿಮಾದಲ್ಲಿ ವಿಶೇಷ ಚೇತನ ಮಕ್ಕಳ ಪೋಷಕರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪ ಎದುರಾಗಿತ್ತು.
ಪೃಥ್ವಿ ಸುಕುಮಾರನ್ ಅದ್ಭುತ ನಟ ಮತ್ತು ನಿರ್ದೇಶಕ. ಸೆನ್ಸಿಬಲ್ ನಟ ಎಂದೇ ಖ್ಯಾತರಾದವರು. ಆದರೆ, ಕಡುವ ಸಿನಿಮಾದಲ್ಲಿ ವಿಶೇಷ ಚೇತನ ಮಕ್ಕಳ ಪಾಲಕರನ್ನು ಅವಮಾನಿಸಿದ್ದರು. ಪಾಲಕರ ತಪ್ಪಿನಿಂದಾಗಿಯೇ ಇಂತಹ ಮಕ್ಕಳು ಜನಿಸುತ್ತಾರೆ ಎಂದು ಅರ್ಥ ಬರುವಂತಹ ಸಂಭಾಷಣೆಯನ್ನು ಬಳಸಲಾಗಿತ್ತು. ಹಾಗಾಗಿ ಪೋಷಕರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಕಾನೂನು ಮೊರೆ ಹೋಗುವುದಾಗಿಯೂ ತಿಳಿಸಿದ್ದರು. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ತೆಲುಗು ನಟ ತ್ರಿಗುಣ್ ಪಾದಾರ್ಪಣೆ
ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ವಿರುದ್ಧ ಕೂಗು ಹೆಚ್ಚಾಗುತ್ತಿದ್ದಂತೆಯೇ ಮೊದಲು ಆ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಆನಂತರ ನಟ ಪೃಥ್ವಿ ಸುಕುಮಾರನ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅವರು ಕೇಳಿಕೊಂಡಿದ್ದಾರೆ. ಕಡುವ ಚಿತ್ರದ ನಿರ್ದೇಶಕ ಶಾಜಿ ಕೈಲಾಸ್ ಕೂಡ ಬಹಿರಂಗವಾಗಿಯೇ ಪಾಲಕರಿಗೆ ಕ್ಷಮೆ ಕೇಳಿದ್ದಾರೆ.