ಕನ್ನಡ ಪ್ರಸಿದ್ಧ ಕಿರುತೆರೆ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್: ಜ್ಯೋತಿ ರೈ ಹೇಳಿದ್ದೇನು?

Public TV
2 Min Read
jyothi rai 2

ನ್ನಡ ಕಿರುತೆರೆ ಲೋಕದ ಪ್ರಸಿದ್ಧ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಒಟ್ಟು ಮೂರು ಅಶ್ಲೀಲ ವಿಡಿಯೋಗಳು ಹಾಗೂ ಒಂದಷ್ಟು ಅಶ್ಲೀಲ ಫೋಟೋಗಳನ್ನು ಅನೇಕರು ಕದ್ದು ಮುಚ್ಚಿ ಹಂಚಿಕೊಂಡಿದ್ದರು.  ಎಡಿಟ್ ಬಾ ಅಭಿ ಎನ್ನುವ ಎಕ್ಸ್ ಖಾತೆಯಲ್ಲಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಬರೆದುಕೊಂಡಿದ್ದು. ಇದಕ್ಕೆ ಸಂಬಂಧಿಸಿದಂತೆ ಜ್ಯೋತಿ ರೈ ಸುದೀರ್ಘವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Jyoti Rai 2

ಈ ಕುರಿತಂತೆ ಜ್ಯೋತಿ ರೈ ಪ್ರತಿಕ್ರಿಯೆ ನೀಡದೇ ಇದ್ದರೂ, ಕೆಲವು ವ್ಯಕ್ತಿಗಳು ತಮ್ಮ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ದೂರು ಕೂಡ ನೀಡಿರುವುದಾಗಿ ತಿಳಿಸಿದ್ದಾರೆ. ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಫೇಕ್ ಎಂದು ಅವರು ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಕೆಲವರ ನಂಬರ್ ನಿಂದ ನನಗೆ ಕರೆಗಳು ಬಂದಿದ್ದವು. ಅವರೇ ಇಂದು ನನ್ನದು ಎನ್ನಲಾಗುತ್ತಿರುವ ವಿಡಿಯೋ ಮತ್ತು ಫೋಟೋ ಕಳುಹಿಸಿದ್ದಾರೆ ಎಂದು ಬರೆದಿದ್ದಾರೆ.

Jyoti Rai 4

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಸಖತ್ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ. ಕನ್ನಡದ ಕಿರುತೆರೆಯ ಪ್ರಸಿದ್ಧ ನಟಿಯೊಬ್ಬರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಮೂರು ಅಶ್ಲೀಲ ವಿಡಿಯೋಗಳು ಮತ್ತು ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೇಲ್ ಆಗುತ್ತಿದ್ದವು. ಅವು ಕನ್ನಡದ ನಟಿಯದ್ದು ಎನ್ನುವಂತೆ ಬಿಂಬಿಸಲಾಗಿತ್ತು.

Jyoti Rai 3

ಕನ್ನಡದಲ್ಲಿ ಜೋಗುಳ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಮತ್ತು ಈಗ ಪರಭಾಷೆಯ ಕಿರುತೆರೆ ಹಾಗೂ ವೆಸ್ ಸಿರೀಸ್ ಗಳಲ್ಲಿ ನಟಿಸಿರುವ ಈ ನಟಿ ಇತ್ತೀಚೆಗಷ್ಟೇ ತಮ್ಮ ಮತ್ತೊಂದು ಸಂಬಂಧವನ್ನು ಖಚಿತ ಪಡಿಸಿದ್ದರು ಎಂದು ಪ್ರಚಾರ ಮಾಡಲಾಗಿತ್ತು. ಆ ನಟಿ ಬೇರೆ ಯಾರೂ ಅಲ್ಲ ಮಂಗಳೂರಿನ ಬೆಡಗಿ ಜ್ಯೋತಿ ರೈ ಎಂಬ ಬಿಲ್ಡ್ ಅಪ್ ಕೂಡ ಕೊಡಲಾಗಿತ್ತು.

Jyoti Rai 1

ಜ್ಯೋತಿ ರೈ ಕನ್ನಡದಲ್ಲಿ ಬದುಕು ಕಟ್ಟಿಕೊಂಡು ಇದೀಗ ಪರಭಾಷಾ ಧಾರಾವಾಹಿಗಳಲ್ಲೂ ಮಿಂಚುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ತಮಗಿಂತ ಚಿಕ್ಕ ವಯಸ್ಸಿನ ನಿರ್ದೇಶಕನ ಜೊತೆ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆ ನಿರ್ದೇಶಕನ ಜೊತೆಗಿನ ಫೋಟೋಗಳನ್ನೂ ಅವರು ಅಪ್ ಲೋಡ್ ಮಾಡಿದ್ದರು.

 

ಜೊತೆಗೆ ಸದಾ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ಜ್ಯೋತಿ ರೈ… ಆಗಾಗ್ಗೆ ಹಾಟ್ ಫೋಟೋಗಳನ್ನು ಶೇರ್ ಮಾಡಿ, ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿಸುತ್ತಿರುತ್ತಾರೆ. ಆದರೆ, ಈ ಬಾರಿ ಅವರು ಅಶ್ಲೀಲ ವಿಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್ಚೆಲ್ ಎಬ್ಬಿಸಿದ್ದರು. ಈಗ ಅದಕ್ಕೆಲ್ಲ ಸ್ಪಷ್ಟನೆ ಸಿಕ್ಕಿದೆ.

Share This Article