ಕರಿಮಣಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರೋ ಕನ್ನಡದ ಹೆಸರಾಂತ ಕಿರುತೆರೆ ನಿರ್ದೇಶಕ ವಿನೋದ್ ದೊಂಡಾಲೆ (Vinod Dondale) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ʻಕರಿಮಣಿʼ, ʻಶಾಂತಂ ಪಾಪಂʼ ಸೇರಿದಂತೆ ಹಲವು ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದರು.
ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದ ಇವರು ಸದ್ಯ ನಿನಾಸಮ್ ಸತೀಶ್ ನಟನೆಯ ʻಅಶೋಕ ಬ್ಲೇಡ್ʼ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈಗಾಗಲೇ ಸಿನಿಮಾ ಶೇಕಡಾ 90ರಷ್ಟು ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೂ ವಿನೋದ್ ಸಿದ್ಧತೆ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಶೂಟಿಂಗ್ ಕುರಿತಂತೆ ನೀನಾಸಂ ಸತೀಶ್ ಜೊತೆ ಚರ್ಚೆ ಮಾಡಿದ್ದರು.
ನಗರಬಾವಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಹಿರಿಯ ನಿರ್ದೇಶಕ ಜೊತೆಯೂ ಕೆಲಸ ಮಾಡಿದ್ದ ವಿನೋದ್ ಅತಿಥಿ,ಬೇರು,ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು