ನವದೆಹಲಿ: ದೂರದರ್ಶನದ ಖ್ಯಾತ ಮಾಜಿ ನಿರೂಪಕಿ ಸರಳಾ ಮಹೇಶ್ವರಿ (Sarala Maheshwari) ಅವರಿಂದು (ಫೆ.12) ರಂದು ತಮ್ಮ 71ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ಈ ಕುರಿತು ದೂರದರ್ಶನ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸರಳಾ ಮಹೇಶ್ವರಿ ಅವರು ಭಾರತೀಯ ದೂರದರ್ಶನ ಪತ್ರಿಕೋದ್ಯಮದಲ್ಲಿ ಓರ್ವ ಹೆಮ್ಮೆಯ ನಿರೂಪಕಿಯಾಗಿದ್ದವರು. ಅವರು ತಮ್ಮ ಧ್ವನಿ, ಉಚ್ಚಾರಣೆ, ಸುದ್ದಿ ವಾಚನದ ಮೂಲಕ ಭಾರತೀಯ ಪತ್ರಿಕೋದ್ಯಮದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದರು. ಜೊತೆಗೆ ಅವರ ಸರಳತೆ, ಸಂಯಮ ಹಾಗೂ ವ್ಯಕ್ತಿತ್ವದಿಂದ ವೀಕ್ಷಕರ ಹೃದಯದಲ್ಲಿ ಆಳವಾದ ವಿಶ್ವಾಸ ಗಳಿಸಿದ್ದರು ಎಂದು ಬರೆದುಕೊಂಡಿದೆ.
दूरदर्शन परिवार की ओर से श्रीमती सरला माहेश्वरी को भावपूर्ण श्रद्धांजलि। वह दूरदर्शन की सम्मानित और प्रतिष्ठित समाचार वाचिका थीं, जिन्होंने अपनी सौम्य आवाज़, सटीक उच्चारण और गरिमापूर्ण प्रस्तुति से भारतीय समाचार जगत में विशेष स्थान बनाया। उनकी सादगी, संयम और व्यक्तित्व ने दर्शकों… pic.twitter.com/Hx8glZI7rk
— Doordarshan National दूरदर्शन नेशनल (@DDNational) February 12, 2026
1980 ಮತ್ತು 1990ರ ದಶಕಗಳಲ್ಲಿ ದೂರದರ್ಶನ ವಾಹಿನಿಯಲ್ಲಿ ನಿರೂಪಕಿಯಾಗಿ ಸರಳಾ ಮಹೇಶ್ವರಿ ಅವರು ಎಲ್ಲರ ಮನೆಮಾತಾಗಿದ್ದರು. ಸುಮಾರು ಮೂರು ದಶಕಗಳ ಕಾಲ 1976ರಿಂದ 2005ರವರೆಗೆ ಸ್ಪಷ್ಟ ಉಚ್ಚರಣೆಯೊಂದಿಗೆ ಹಿಂದಿ ಸುದ್ದಿ ಬುಲೆಟಿನ್‌ಗಳ ನೀಡಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಓದುತ್ತಿರುವಾಗ ನಿರೂಪಣಾ ವೃತ್ತಿಯನ್ನು ಆರಂಭಿಸಿದರು. ಅನೌನ್ಸರ್ ಆಗಿ ಆಡಿಷನ್ ನೀಡಿದ ನಂತರ ಸುದ್ದಿ ನಿರೂಪಣೆಗೆ ತೆರಳಿದರು. ಅಲ್ಲಿಂದ ಪ್ರಾರಂಭವಾಗಿ ಇಂದಿಗೂ ಅವರ ನಿರೂಪಣೆ ಸುದ್ದಿ ಪರದೆಯ ಮೇಲೆ ಅಚ್ಚಳಿಯದಂತಿದೆ.

