ಹೊಸ ಹೊಸ ವಿನ್ಯಾಸದ ಕಾಸ್ಟ್ಯೂಮ್ ನಿಂದಾಗಿ ಉರ್ಫಿ ಜಾವೇದ್ (Urfi Javed) ಟ್ರೆಂಡಿಂಗ್ ನಲ್ಲಿ ಇರುತ್ತಾರೆ. ಅವರ ಬಹುತೇಕ ಕಾಸ್ಟ್ಯೂಮ್ ಗಳನ್ನು ಅವರೇ ಡಿಸೈನ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಾರಿ ಬಾಲಿವುಡ್ ನ ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಶ್ರಾಫ್ (Anita Shroff) ಹೊಸ ರೀತಿಯಲ್ಲಿ ಉರ್ಫಿಗಾಗಿ ಫ್ಯಾಷನ್ ಡಿಸೈನ್ ಮಾಡಿದ್ದಾರೆ. ಅದು ಮ್ಯಾಗಜಿನ್ ವೊಂದಕ್ಕೆ ಬಳಸಲು ರೆಡಿ ಮಾಡಿರುವುದು ವಿಶೇಷ.
ಉರ್ಫಿ ಬಗ್ಗೆ ಹಲವು ವಿಚಾರಗಳನ್ನೂ ಹಂಚಿಕೊಂಡಿರುವ ಅನಿತಾ, ಸ್ವತಃ ಉರ್ಫಿ ಫ್ಯಾಷನ್ ಶಾಪ್ ಹೊಂದಿರುವ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಉರ್ಫಿಗೆ ಫ್ಯಾಷನ್ ಬಗ್ಗೆ ಇರುವ ಪ್ರೀತಿಯನ್ನೂ ಅವರು ಹೇಳಿಕೊಂಡಿದ್ದಾರೆ. ಉರ್ಫಿಗಾಗಿ ಕಸ್ಟಮ್ ಲುಕ್ ನಲ್ಲಿ ವಸ್ತ್ರ ವಿನ್ಯಾಸ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಉರ್ಫಿಗಿರುವ ಜೀವನ ಪ್ರೀತಿಯ ಬಗ್ಗೆ ಸಾಕಷ್ಟು ಮಾತುಗಳನ್ನೂ ಅವರು ಆಡಿದ್ದಾರೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ
‘ಮ್ಯಾಗಜಿನ್ ಗಾಗಿ ಫೋಟೋ ಶೂಟ್ ಅಂದಾಗ, ಯಾರ ಫೋಟೋಶೂಟ್ ಎಂದು ಮೊದಲು ಗೊತ್ತಾಗಲಿಲ್ಲ. ಆನಂತರ ಉರ್ಫಿ ಜಾವೇದ್ ಎಂದು ಗೊತ್ತಾಯಿತು. ಆಕೆಯನ್ನು ಕರೆಯಿಸಿದಾಗ ನಿಜಕ್ಕೂ ಬೇಸರವಾಯಿತು. ಈಕೆಗೆ ನಾನು ಡಿಸೈನ್ ಮಾಡಬೇಕು ಅಂತ ಒಂದು ಸಲ ಅನಿಸಿದ್ದು ಸುಳ್ಳಲ್ಲ. ಆದರೆ, ಫ್ಯಾಷನ್ ಬಗೆಗೆ ಆಕೆಗಿರುವ ಪ್ರೀತಿ ಮತ್ತು ಗೌರವ ಕಂಡು ನನಗೆ ಅಚ್ಚರಿ ಆಯಿತು. ಉರ್ಫಿಗಾಗಿ ಫ್ಯಾಷನ್ ಡಿಸೈನ್ ಮಾಡಿದೆ ಎನ್ನುವ ಖುಷಿ ನನಗಿದೆ’ ಎಂದಿದ್ದಾರೆ ಅನಿತಾ.
ಕಾಸ್ಟ್ಯೂಮ್ ಕಾರಣದಿಂದಾಗಿಯೇ ಉರ್ಫಿ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ. ಅನೇಕರು ಇವರನ್ನು ಹಿಯಾಳಿಸಿದ್ದಾರೆ. ಅನೇಕರು ದೂರು ನೀಡಿದ್ದಾರೆ. ದುಬೈನಲ್ಲಿ ಪೊಲೀಸ್ ವಶಕ್ಕೂ ಕೂಡ ಪಡೆದಿದ್ದರು. ಏನೇ ಆದರೂ, ಉರ್ಫಿ ಮಾತ್ರ ಬದಲಾಗಿಲ್ಲ. ದಿನಕ್ಕೊಂದು ವೇಷ ಹಾಕಿಕೊಂಡು ಬೀದಿಗೆ ಇಳಿಯುತ್ತಾರೆ. ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲವನ್ನು ತಾವು ಮಾಡುತ್ತಾರೆ.