ನೀಲಿ ಚಿತ್ರಗಳ ಲೋಕದ ಹೆಸರಾಂತ ನಟಿ, ಅಪಾರ ಅಭಿಮಾನಿ ಬಳಗ ಹೊಂದಿದ್ದ ಕೆನಿ ಲಿನ್ ಕಾರ್ಟರ್ (Kagney Linn Karter) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆನಿ ಅವರು ಹಲವು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ (Suicide) ಇದೇ ಕಾರಣವೆಂದು ಊಹಿಸಲಾಗಿದೆ.
Advertisement
36ರ ವಯಸ್ಸಿನ ಕೆನಿ ಲಿನ್ ಕಾರ್ಟರ್ ಯನೈಟೆಡ್ ಸ್ಟೇಟ್ಸ್ ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯ ಖಚಿತ ಪಡಿಸಿದೆ. ಕೆನಿ ಲಿನ್ ಕಾರ್ಟರ್ ಕೇವಲ ನೀಲಿತಾರೆ ಮಾತ್ರ ಆಗಿರಲಿಲ್ಲ. ಓರ್ವ ನೃತ್ಯಗಾರ್ತಿ ಕೂಡ ಆಗಿದ್ದರು. ಗಾಯಕಿಯಾಗಿಯೂ ಹೆಸರು ಮಾಡಿದ್ದರು.
Advertisement
Advertisement
2000 ಇಸವಿಯಲ್ಲಿ ವಯಸ್ಕರ ಸಿನಿಮಾಗಳ ಕ್ಷೇತ್ರಕ್ಕೆ ಎಂದು ಕೊಟ್ಟಿದ್ದ ಅವರು ಬರೋಬ್ಬರಿ 20 ವರ್ಷಗಳ ಕಾಲ ಅದೇ ರಂಗದಲ್ಲೇ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಆನಂತರ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ನಡುವೆ ತಮ್ಮದೇ ಸ್ಟುಡಿಯೋ ಶುರು ಮಾಡಿ, ಪೋಲ್ ಡಾನ್ಸಿಂಗ್ ನಲ್ಲೂ ಸಕ್ರೀಯರಾಗಿದ್ದರು.
Advertisement
ಕೆನಿ ಲಿನ್ ಕಾರ್ಟರ್ ನಿಧನದಿಂದಾಗಿ ಅವರ ಕುಟುಂಬ ಸಂಕಷ್ಟದಲ್ಲಿದೆ. ಅವರ ತಾಯಿಯ ಬದುಕಿಗಾಗಿ ಕೆನಿ ಲಿನ್ ಕಾರ್ಟರ್ ಆಪ್ತ ಬಳಗ ಹಣ ಸಂಗ್ರಹಕ್ಕೂ ಮುಂದಾಗಿದೆ ಎಂದು ಮಾಧ್ಯಮಗಳ ವರದಿ ಮಾಡಿವೆ.