ಅಸ್ಸಾಂನ ಸಾಕಷ್ಟು ಸಿನಿಮಾ, ಸೀರಿಯಲ್ ಮೂಲಕ ಮನೆಮಾತಾದ ಕಿಶೋರ್ ದಾಸ್ ನಿನ್ನೆ ವಿಧಿವಶರಾಗಿದ್ದಾರೆ. ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟನಿಗೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ.
Advertisement
ಯುವ ನಟ 30 ವರ್ಷಕ್ಕೆ ಮೃತಪಟ್ಟಿದ್ದಾರೆ. ಈ ದಾರುಣ ಘಟನೆ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಅಸ್ಸಾಂನ ಖ್ಯಾತ ನಟ ಕಿಶೋರ್ ದಾಸ್ ಅವರು ಕೊರೋನಾದಿಂದ ಪ್ರಾಣ ಬಿಟ್ಟಿದ್ದಾರೆ. ಈ ಮೊದಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಕೊರೋನಾ ಸೋಂಕಿನಿಂದ ಯುವ ನಟ ಕಿಶೋರ್ ನಿನ್ನೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ:ಮೈಸೂರಿನಲ್ಲಿ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ನ ಆರ್ಭಟ
Advertisement
Advertisement
ಸದ್ಯ ಅಸ್ಸಾಂನಲ್ಲಿ ಕಿಶೋರ್ ಸಾವು ಸಂಚಲನ ಮೂಡಿಸಿದೆ. ಕಿಶೋರ್ 30 ವರ್ಷ ತುಂಬುವ ಮುನ್ನವೇ ಸಾವನ್ನಪ್ಪಿದ್ದನ್ನು ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಕೋವಿಡ್ ಪ್ರೋಟೋಕಾಲ್ ಪ್ರಕಾರ ಅವರ ಅಂತಿಮ ಸಂಸ್ಕಾರ ಚೆನ್ನೈನಲ್ಲಿ ನಡೆಯಲಿದೆ. ಇನ್ನು ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಟನ ಮೃತ ದೇಹವನ್ನು ಸ್ವಗ್ರಾಮಕ್ಕೂ ಕಳುಹಿಸಲಾಗುತ್ತಿಲ್ಲ. ಇದರಿಂದ ನಟನ ಅಂತಿಮ ದರ್ಶನಕ್ಕೆ ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
Advertisement
ನಟ ಕಿಶೋರ್ ದಾಸ್ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು, ಆಪ್ತರ ಕಂಬನಿ ಮಿಡಿದಿದ್ದಾರೆ. ಕಿಶೋರ್ ದಾಸ್ ಸಾವು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
Live Tv
[brid partner=56869869 player=32851 video=960834 autoplay=true]