ರಸ್ತೆ ಅಪಘಾತದಲ್ಲಿ ಖ್ಯಾತ ನಟಿ, ಗಾಯಕ ಸಾವು

Public TV
1 Min Read
Anchal Tiwari

ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ (Accident) ಖ್ಯಾತ ನಟಿ ಹಾಗೂ ಗಾಯಕ ಸೇರಿದಂತೆ ಒಟ್ಟು ಒಂಬತ್ತು ಜನರು ನಿಧನರಾಗಿದ್ದಾರೆ. ಪಂಚಾಯತ್ 2 ಚಿತ್ರದ ಮೂಲಕ ಖ್ಯಾತರಾಗಿದ್ದ ಭೋಜ್ಪುರಿ ನಟಿ ಆಂಚಲ್ ತಿವಾರಿ (Anchal Tiwari) ಮತ್ತು ಗಾಯಕ ಛೋಟು (Chhotu Pandey) ಪಾಂಡೆ ಸಾವನ್ನಪ್ಪಿರುವ (passed away) ಸೆಲೆಬ್ರಿಟಿಗಳು.
Chhotu Pandey

ಭಾನುವಾರ ಸಂಜೆ ಬಿಹಾರದ ಕೈಮೂರ್ನ್ ದೇವಕಲಿ ಎಂಬ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಈ ಅಪಘಾತದಲ್ಲಿನಟಿ, ಗಾಯಕರು ಮತ್ತು ಅವರ ಆಪ್ತರು ಇದ್ದರು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಮೊದಲು ಕಾರು ಬೈಕ್ ಢಿಕ್ಕೆ ಆಗಿದೆ. ಹಿಂದಿನಿಂದ ಬಂದ ಲಾರಿಯು ಕಾರಿಗೆ ಗುದ್ದಿದ್ದರಿಂದ ಅಪಘಾತ ತೀವ್ರವಾಗಿದೆ ಎಂದು ಹೇಳಲಾಗುತ್ತಿದೆ. ಗಾಯಕ ಛೋಟು ಪಾಂಡೆ, ನಟಿಯರಾದ ಆಂಚಲ್ ತಿವಾರಿ ಮತ್ತು ಸಿಮ್ರಾನ್ ಶ್ರೀವಾಸ್ತವ, ಸತ್ಯ ಪ್ರಕಾಶ, ಬಾಗೀಶ್ ಪಾಂಡೆ ಹೀಗೆ 9 ಜನರನ್ನು ಈಗಾಗಲೇ ಗುರುತಿಸಲಾಗಿದೆ.

Share This Article