ಇಡೀ ಕುಟುಂಬ ಮದುವೆಯ ಸಡಗರದಲ್ಲಿ ಸಂಭ್ರಮಿಸುತ್ತಿದ್ದರೆ, ಆ ಕುಟುಂಬಕ್ಕೆ ನೇಣು ಹಾಕಿಕೊಂಡು ಶಾಕ್ ನೀಡಿದ್ದಾರೆ ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ (Amrita Pandey). ಮುಂಬೈನಲ್ಲಿ ವಾಸವಿದ್ದ ಅಮೃತಾ, ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾಗಲ್ಪುರಕ್ಕೆ ಬಂದಿದ್ದ ಇವರು ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
Advertisement
ಸಾವಿಗೂ ಮುನ್ನ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದು, ಅದು ಅನುಮಾನ ಮೂಡಿಸುವಂತಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸ್ಟೇಟಸ್ ಹಾಕಿ ಒಂದು ಗಂಟೆ ನಂತರ ಅಮೃತಾ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಅಮೃತಾಗೆ ಲವ್ ಬ್ರೇಕ್ ಅಪ್ ಆಗಿದ್ದೆ ಸಾವಿಗೆ ಕಾರಣ ಎನ್ನಲಾಗುತ್ತಿದೆ.
Advertisement
Advertisement
ವಾಟ್ಸಪ್ ಸ್ಟೇಟಸ್ ನಲ್ಲಿ ಅವರು ಅವನ ಜೀವನ 2 ದೋಣಿಯಲ್ಲಿ ನಡೆಯುತ್ತಿದೆ. ನನ್ನ ಜೀವನವನ್ನು ಕೊನೆಗೊಳಿಸುವ ಮೂಲಕ, ಅವನಿಗೆ ಸುಗಮ ದಾರಿ ಮಾಡಿಕೊಡುವೆ ಎಂದು ಬರೆದುಕೊಂಡಿದ್ದಾರೆ. ಪೊಲೀಸರು (Police) ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.