ಕನ್ನಡದ ಹೆಸರಾಂತ ನಟ ಸತೀಶ್ ನೀನಾಸಂ (Ninasam Satish) ಅವರನ್ನು ಮಂಡ್ಯ (Mandya) ಜಿಲ್ಲಾ ಮತದಾನ ಜಾಗೃತಿ ರಾಯಭಾರಿಯನ್ನಾಗಿ (Election Ambassador) ಚುನಾವಣಾ ಆಯೋಗ ನೇಮಿಸಿದೆ. ಕರ್ನಾಟಕ ವಿಧಾನಸಭೆ (Assembly) ಚುನಾವಣೆ 2023 ಜಾರಿಯಲ್ಲಿದ್ದು, ಅತೀ ಹೆಚ್ಚು ಮತದಾನ ಆಗುವ ಉದ್ದೇಶದಿಂದ ಆಯೋಗವು ಮಂಡ್ಯ ಜಿಲ್ಲೆಯವರೇ ಆಗಿರುವ ಸತೀಶ್ ಅವರನ್ನು ನೇಮಿಸಿ ಜಾಗೃತಿ ಕಾರ್ಯಕ್ರಮವನ್ನು ಶುರು ಮಾಡಿದೆ.
Advertisement
ನಿನ್ನೆ ಮಂಡ್ಯದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸತೀಶ್, ‘ಜಾತಿ, ಮತ, ಕುಲ ಯಾವುದನ್ನೂ ಲೆಕ್ಕಿಸದೇ, ಆಮಿಷಗಳಿಗೆ ಒಳಗಾಗದೇ ಪ್ರಮಾಣಿಕ ವ್ಯಕ್ತಿಗಳಿಗೆ ಮತದಾನ ಮಾಡಿ, ಮತದಾನ ಅಮೂಲ್ಯವಾದದ್ದು ಅದನ್ನು ಮಾರಿಕೊಳ್ಳಬೇಡಿ ಮತ್ತು ಹಾಳು ಮಾಡಬೇಡಿ’ ಎಂದು ಅವರು ಮಾತನಾಡಿದರು. ಇದನ್ನೂ ಓದಿ:ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ತೆಲುಗು ನಟಿ
Advertisement
Advertisement
ಮತದಾನದ ಶಕ್ತಿಯನ್ನು ಅರಿವು ಮಾಡಿಕೊಟ್ಟ ಸತೀಶ್, ‘ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗಿಯಾಗಿ. ನಾನ್ಯಾಕೆ ಮತದಾನ ಮಾಡಬೇಕು ಎಂದು ಆಲೋಚಿಸುವ ಬದಲು, ಮತದಾನ ಮಾಡಿದರೆ ಎಂತಹ ರಾಷ್ಟ್ರವನ್ನು ಕಟ್ಟಬಹುದು ಎನ್ನುವುದರತ್ತ ಯೋಚಿಸಿ. ರಾಜ್ಯದಲ್ಲೇ ಮಂಡ್ಯದಲ್ಲಿ ಅತೀ ಹೆಚ್ಚು ಮತದಾನ ಆಗುವಂತೆ ಮಾಡಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಆಗಿದೆ’ ಎಂದು ಸತೀಶ್ ತಿಳಿಸಿದರು.
Advertisement
ಮತದಾನದ ಕುರಿತಾಗಿ ಸತೀಶ್ ಯಾವಾಗಲೂ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಈ ಬಾರಿ ಚುನಾವಣೆಯ ರಾಯಭಾರಿ ಆಗಿದ್ದರಿಂದ ಮತ್ತಷ್ಟು ಜವಾಬ್ದಾರಿ ತಗೆದುಕೊಂಡು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಂಡ್ಯದಲ್ಲಿ ಮಾತ್ರವಲ್ಲ ಕರ್ನಾಟಕದ ತುಂಬಾ ಅವರ ಅಭಿಮಾನಿಗಳು ಇದ್ದು ಮುಂದಿನ ದಿನಗಳಲ್ಲಿ ಅವರು ಬೇರೆ ಬೇರೆ ಜಿಲ್ಲೆಗಳಿಗೂ ರಾಯಭಾರಿ ಆಗಲಿ ಎನ್ನುವುದು ಸತೀಶ್ ಅಭಿಮಾನಿಗಳ ಆಸೆ.
ಸದ್ಯ ಅಶೋಕ ಬ್ಲೇಡ್, ಮ್ಯಾಟ್ನಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸತೀಶ್, ಹೊಸ ರೀತಿಯ ಆಲೋಚನೆಯನ್ನು ಮಾಡಬಲ್ಲಂತ ನಟ. ವಿಭಿನ್ನ ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಚುನಾವಣಾ ಆಯೋಗ ಅವರಿಗೆ ಮಹತ್ತರವಾದ ಜವಾಬ್ದಾರಿಯನ್ನು ನೀಡಿದೆ.