ಮರಾಠಿ (Marathi) ಚಿತ್ರ ರಂಗದ ಹೆಸರಾಂತ ನಟ ರವೀಂದ್ರ ಮಹಾಜನಿ (Ravindra Mahajani) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಫ್ಲ್ಯಾಟ್ ನಲ್ಲಿ ಮೃತದೇಹ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಅವರು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಪುಣೆಯ (Pune) ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ವಾಸವಾಗಿದ್ದರು. ಅವರು ವಾಸುತ್ತಿದ್ದ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಫ್ಲ್ಯಾಟ್ ಬಾಗಿಲು ತೆರೆದಾಗ ರವೀಂದ್ರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶುಕ್ರವಾರ ಸಂಜೆಯಿಂದಲೇ ಅವರ ಫ್ಲ್ಯಾಟ್ ನಿಂದ ವಾಸನೆ ಬರುತ್ತಿತ್ತು ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ.
70-80ರ ದಶಕದಲ್ಲಿ ಪ್ರಮುಖ ನಟರಾಗಿ ರವೀಂದ್ರ ಗುರುತಿಸಿಕೊಂಡಿದ್ದರು. ಹಲವಾರು ಹಿಟ್ ಚಿತ್ರಗಳನ್ನೂ ಅವರು ನೀಡಿದ್ದಾರೆ. ಮರಾಠಿ, ಗುಜರಾತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ರವೀಂದ್ರ ನಟಿಸಿದ್ದಾರೆ. ಮರಾಠಿ ಚಿತ್ರರಂಗವಂತೂ ಅವರನ್ನು ವಿನೋದ್ ಖನ್ನಾ ಎಂದೇ ಅಭಿಮಾನದಿಂದ ಕರೆಯುತ್ತಿತ್ತು.
Web Stories