CinemaKarnatakaLatestLeading NewsMain PostSandalwoodSouth cinemaTV Shows

ಡಯಟ್ ಕಾರಣದಿಂದಾಗಿ ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ನಿಧನ?

ನ್ನಡದ ಖ್ಯಾತ ಹಿರಿಯನಟ ಕಲ್ಯಾಣ್ ಕುಮಾರ್ (Kalyan Kumar) ಸೊಸೆ ಪ್ರಿಯದರ್ಶಿನಿ ನಿಧನರಾಗಿದ್ದಾರೆ. ಕಲ್ಯಾಣ್ ಕುಮಾರ್ ಪುತ್ರ, ನಟ ಭರತ್ ಕಲ್ಯಾಣ್ ಅವರ ಪತ್ನಿಯೂ ಆಗಿರುವ ಪ್ರಿಯದರ್ಶಿನಿ ಪ್ಯಾಲಿಯೋ ಡಯಟ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿಯೇ ಅವರು ನಿಧನರಾಗಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಡಯಟ್ ಕಾರಣದಿಂದಾಗಿಯೇ ಅವರು ಕೆಲ ದಿನಗಳಿಂದ ಕೋಮಾದಲ್ಲಿ ಇದ್ದರು, ಹಲವು ದಿನಗಳಿಂದ ಅವರಿಗೆ ತೀವ್ರ ನಿಗಾಘಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರಿಯದರ್ಶಿನಿ (Priyadarshini) ತೂಕದ ಕಾರಣಕ್ಕಾಗಿ ಪ್ಯಾಲಿಯೋ ಡಯಟ್ (Diet) ನಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಡಯಟ್ ಬದಲಾವಣೆ ಕಾರಣದಿಂದಾಗಿ ಅವರು ಮಧುಮೇಹದಿಂದಲೂ ಬಳಲುತ್ತಿದ್ದರು. ಡಯಲ್ ಬದಲಾಗಿದ್ದರಿಂದ ಮಧುಮೇಹ ಏಕಾಏಕಿ ಏರಿಕೆ ಕಂಡಿದೆ. ಕೂಡಲೇ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಕೋಮಾಗೆ ಜಾರಿದ್ದಾರೆ. ಹಾಗಾಗಿ ತೀವ್ರ ನಿಗಾಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಧನರಾಗಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

ಸತತ ಮೂರು ತಿಂಗಳಿಂದಲೂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾಗೆ ಜಾರಿದ ನಂತರ  ಅವರ ಆರೋಗ್ಯ ಗಂಭೀರವಾಗುತ್ತಲೇ ಸಾಗಿತು. ಕೋಮಾದಿಂದ ಆಚೆ ಅವರು ಬರಲೇ ಇಲ್ಲ ಎಂದೂ ಹೇಳಲಾಗುತ್ತಿದೆ. ಚೆನ್ನೈನಲ್ಲಿರುವ  ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು, ಕಿರುತೆರೆಯ ಖ್ಯಾತ ನಟ, ಪತಿ ಭರತ್ ಅವರನ್ನು ಮದುವೆಯಾಗಿದ್ದರು.

ಕಲ್ಯಾಣ್ ಕುಮಾರ್ ಪುತ್ರ ಭರತ್ ಕಲ್ಯಾಣ್ (Bharat Kalyan) ತಮಿಳು ಕಿರುತೆರೆಯ ಫೇಮಸ್ ನಟ. ಕನ್ನಡಲ್ಲೂ ಅವರು ಸಿನಿಮಾ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಅಷ್ಟೇನೂ ಅವರು ಹೆಸರು ಮಾಡಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಅವರು ಕಿರುತೆರೆಗೆ ಹೋಗಬೇಕಾಯಿತು. ಇದೀಗ ಕಿರುತೆರೆಯಲ್ಲಿ ಫೇಮಸ್ ನಟನಾಗಿ ಭರತ್ ಬೆಳೆದಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button