ತೆಲುಗಿನ ಹೆಸರಾಂತ ನಟ ಬಾಲಕೃಷ್ಣ (Balakrishna) ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಸಿನಿಮಾ ಇವೆಂಟ್ ವೇಳೆ ನಟಿ ಜೊತೆ ದುರ್ವರ್ತನೆ ತೋರಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇದಿಕೆಯ ಮೇಲೆ ಬಂದ ಬಾಲಕೃಷ್ಣ ನಟಿ ಅಂಜಲಿಯನ್ನು (Anjali) ತಳ್ಳಿದರು. ಕ್ಷಣ ಹೊತ್ತು ಅಂಜಲಿ ಶಾಕ್ ಒಳಗಾಗಿ ಆಮೇಲೆ ಸುಧಾರಿಸಿಕೊಳ್ಳುತ್ತಾರೆ. ಈ ವಿಡಿಯೋ ಕುರಿತು ಪರ ವಿರೋಧ ಚರ್ಚೆ ಶುರುವಾಗಿತ್ತು.
ಬಾಲಕೃಷ್ಣ ವೇದಿಕೆಗೆ ಬರುವ ಮುಂಚೆ ವೇದಿಕೆಯ ಮುಂಭಾಗದಲ್ಲಿ ಕೂತಿದ್ದರು. ಅಲ್ಲಿ ಅವರಿಗೆ ಕುಡಿಯಲು ಮದ್ಯ ಇಡಲಾಗಿತ್ತು. ಮದ್ಯವನ್ನು ನೀರಿನೊಂದಿಗೆ ಬೆರೆಸಿದ್ದ ಬಾಟಲ್ ಪತ್ತೆಯಾಗಿತ್ತು. ಹಾಗಾಗಿ ಕುಡಿದು ಬಾಲಕೃಷ್ಣ ಅವರು ಆ ರೀತಿ ನಡೆದುಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು.
ಈ ಕುರಿತಂತೆ ಸಿನಿಮಾ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದು, ಬಾಲಕೃಷ್ಣ ಅವರು ಕುಡಿದಿರಲಿಲ್ಲ. ಗ್ರಾಫಿಕ್ಸ್ ಮಾಡಿ ಬಾಟಲ್ ಇಡಲಾಗಿದೆ ಎಂದಿದ್ದಾರೆ. ನಟಿ ಅಂಜಲಿ ಕೂಡ ಪ್ರತಿಕ್ರಿಯೆ ನೀಡಿ, ಬೇಕು ಅಂತ ಬಾಲಕೃಷ್ಣ ಅವರು ನನ್ನನ್ನು ತಳ್ಳಿಲ್ಲ. ಅದೊಂದು ಫನ್ನಿ ಸನ್ನಿವೇಶ ಎಂದಿದ್ದಾರೆ. ಈ ಇಬ್ಬರೂ ಬಾಲಕೃಷ್ಣ ಪರವಾಗಿಯೇ ಮಾತನಾಡಿದ್ದಾರೆ.