ಬೆಂಗಳೂರು/ಹಾಸನ: ಚುನಾವಣೆ (Election) ಮುನ್ನ ದಳಪತಿಗಳಿಗೆ ಫ್ಯಾಮಿಲಿ ಟಿಕೆಟ್ ಟೆನ್ಶನ್ ಶುರುವಾಗಿದೆ. ಹಾಸನದಿಂದ ಟಿಕೆಟ್ ಬೇಕು ಅಂತ ಮಾಜಿ ಸಚಿವ ಹೆಚ್‍ಡಿ ರೇವಣ್ಣ (HD Revanna) ಪತ್ನಿ ಭವಾನಿ ರೇವಣ್ಣ (Bhavani Revanna) ಹಠ ಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭವಾನಿ ರೇವಣ್ಣರ ನಡೆಯಿಂದ ಜೆಡಿಎಸ್ ವರಿಷ್ಠ ದೇವೇಗೌಡರು (HD Revanna) ಸಂಕಟಕ್ಕೆ ಸಿಲುಕಿದ್ದಾರೆ ಅಂತ ಚರ್ಚೆ ಆಗ್ತಿದೆ. ಅಷ್ಟೇ ಅಲ್ಲ, ಅಮ್ಮನ ಜೊತೆ ಮಗ ಪ್ರಜ್ವಲ್ ರೇವಣ್ಣ (Prajwal Revanna) ಕೂಡಾ ಅರಸೀಕೆರೆಯಿಂದ ಸ್ಪರ್ಧೆಗೆ ಒಲವು ತೋರಿದ್ದಾರಂತೆ. ಇಬ್ಬರ ವಿಷಯದಲ್ಲಿ ನಿರ್ಧಾರಕ್ಕೆ ಬರಲು ದಳಪತಿಗಳಿಗೆ ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ಬಿಜೆಪಿಗರಿಗೆ ಎಲೆಕ್ಷನ್ ಟಾಸ್ಕ್ ವರಿ- ಚುನಾವಣೆ ಮುನ್ನ ತ್ರಿಮೂರ್ತಿಗಳ ರಾಜ್ಯ ಪ್ರವಾಸ
ಜೆಡಿಎಸ್ ಮೇಲೆ ಕುಟುಂಬ ಪಕ್ಷ ಅನ್ನೋ ದೊಡ್ಡ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಅದು ಸಾಬೀತಾಗುತ್ತದೆ. ಹಾಸನದಲ್ಲಿ ಕುಟುಂಬ ಸದಸ್ಯರಿಗೆ ಮತ್ತೆ ಟಿಕೆಟ್ ಕೊಟ್ಟರೆ ಬಂಡಾಯವೇಳುವ ಸಾಧ್ಯತೆ ಇದೆ. ಮತ್ತೆ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಕುಟುಂಬಕ್ಕೆ ಪಕ್ಷ ಸೀಮಿತ ಅಂತ ಟೀಕೆ ವ್ಯಕ್ತವಾಗುತ್ತದೆ. ಮುಂದೆ ಇದೇ ಬಿಜೆಪಿ-ಕಾಂಗ್ರೆಸ್‍ಗೆ ಚುನಾವಣಾ ಅಸ್ತ್ರ ಆಗುವ ಎಲ್ಲಾ ಸಾಧ್ಯತೆಗಳಿವೆ.