ಹಾವೇರಿ: ಒಂದೇ ಮನೆಯಲ್ಲಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಭಾರತಿ ಕಮಡೊಳ್ಳಿ (40), ಸೌಜನ್ಯ ಕಮಡೊಳ್ಳಿ (20) ಹಾಗೂ ಕಿರಣ ಕಮಡೊಳ್ಳಿ (22) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ – ಜಾಮೀನು ಅರ್ಜಿಯನ್ನು ವಾಪಸ್ ಪಡೆದ ಪೀಸ್ ಪೀಸ್ ಪ್ರೇಮಿ
ಮೂರು ತಿಂಗಳ ಹಿಂದಷ್ಟೇ ಸೌಜನ್ಯ ಮತ್ತು ಕಿರಣನ ಮದುವೆಯಾಗಿತ್ತು (Marriage). ಮೃತ ಭಾರತಿ ಅವರ ಕಿರಿಯ ಪುತ್ರ ಅರುಣ (21) ಕಳೆದ ಕೆಲವು ದಿನಗಳಿಂದ ಗ್ರಾಮದ ಪುಟ್ಟಣ್ಣಶೆಟ್ಟಿ ಎಂಬವರ ಕುಟುಂಬದ ಯುವತಿಯನ್ನು ಪ್ರೀತಿಸುತ್ತಿದ್ದ (Love). ಕಳೆದ ಐದಾರು ದಿನಗಳಿಂದ ಅರುಣನ ಜೊತೆ ಯುವತಿಯೂ ನಾಪತ್ತೆಯಾಗಿದ್ದಳು. ಇದರಿಂದ ಯುವತಿ ಮನೆಯವರು ತಮ್ಮ ಮಗಳನ್ನು ಕರೆತರುವಂತೆ ಅರುಣನ ತಾಯಿ ಭಾರತಿ, ಹಿರಿಯ ಮಗ ಕಿರಣ ಮತ್ತು ಕಿರಣನ ಪತ್ನಿ ಸೌಜನ್ಯಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು.
ಯುವತಿ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಮೂವರೂ ನೇಣಿಗೆ ಶರಣಾಗಿದ್ದಾರೆ. ಮೂವರ ಆತ್ಮಹತ್ಯೆಗೆ ಪುಟ್ಟಣ್ಣಶೆಟ್ಟಿ ಕುಟುಂಬದವರೇ ಕಾರಣ ಎಂದು ಮೃತ ಕಿರಣನ ತಂದೆ ವಿರುಪಾಕ್ಷಪ್ಪ ಆರೋಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹಾವೇರಿ ಗ್ರಾಮಾಂತರ ವಿಭಾಗದ ಪೊಲೀಸ್ ಠಾಣೆ (Haveri Rural Police) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪರಭಾಷೆಯಲ್ಲೂ ಶಿವರಾಜ್ ಕುಮಾರ್ ಬ್ಯುಸಿ : ಎರಡು ತಮಿಳು, ಒಂದು ತೆಲುಗು ಚಿತ್ರದಲ್ಲಿ ನಟನೆ