ನ್ಯಾಯಕ್ಕಾಗಿ ನೀರಿನ ಟ್ಯಾಂಕ್ ಏರಿ ಕುಳಿತ ಕುಟುಂಬ- ಆತ್ಮಹತ್ಯೆ ಬೆದರಿಕೆ

ಚಿಕ್ಕಬಳ್ಳಾಪುರ: ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಅವರು ಜಮೀನು ವಿಚಾರದಲ್ಲಿ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಚಿಂತಾಮಣಿ ಮೂಲದ ಕುಟುಂಬವೊಂದು ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಜಿಕೆವಿ ಲೇಔಟ್‍ನಲ್ಲಿ ನಡೆದಿದೆ.
ನಿವೃತ್ತ ಡಿವೈಎಸ್ಪಿ ಕೋನಪ್ಪ ರೆಡ್ಡಿ ಅವರ ಕುಟುಂಬದ ಸದಸ್ಯರಾದ ಆಂಜನೇಯ ರೆಡ್ಡಿ ಕುಟುಂಬದ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಬೆಳ್ಳಂಬೆಳಗ್ಗೆ ನೀರಿನ ಟ್ಯಾಂಕ್ ಹೇರಿ ಕುಳಿತಿದ್ದು, ಜೊತೆಯಲ್ಲಿ ಪೆಟ್ರೋಲ್ ತುಂಬಿದ ಕ್ಯಾನ್ ಸಹ ಕೊಂಡೊಯ್ದಿದ್ದಾರೆ. ಕೋನಪ್ಪರೆಡ್ಡಿ ಅವರು 4 ಎಕರೆ 18 ಗುಂಟೆ ಜಮೀನು ವಿಚಾರದಲ್ಲಿ ಫೋರ್ಜರಿ ಮಾಡಿ ಮೋಸ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್
ನಮಗೆ ನ್ಯಾಯ ದೊರಕಿಸಿ ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿ ಮನವೊಲಿಸುವ ಕಾರ್ಯ ನಡೆಸುತ್ತಿದ್ದಾರೆ. ಆದರೆ ಪೊಲೀಸರ ಮನವೊಲಿಕೆಗೂ ಜಗ್ಗದ ಆಂಜನೇಯರೆಡ್ಡಿ ಕುಟುಂಬಸ್ಥರು ಹಠ ಹಿಡಿದು ನ್ಯಾಯಕ್ಕಾಗಿ ಪಟ್ಟು ಹಿಡಿದು ಕೂತಿದ್ದಾರೆ. ಇದನ್ನೂ ಓದಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಡಾ.ಕೆ.ಸುಧಾಕರ್