ಬೆಂಗಳೂರು: ಭಾರತೀಯ ಜನತಾ ಪಾರ್ಟಿ(BJP)ಯ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತಾ ಎಂಬ ಚರ್ಚೆಯೊಂದು ರಾಜ್ಯ ರಾಜಕೀಯ ವಲಯದಲ್ಲಿ ಎದ್ದಿದೆ.
ವಂಶಪಾರಂಪರ್ಯ ರಾಜಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ಬ್ರೇಕ್ ಹಾಕ್ತಾರೆ ಅನ್ನೋ ಮಾತುಗಳು ಕೇಳಿಬರುತ್ತವೆ. ಹೀಗಾಗಿ ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆ ರಾಜಕೀಯ ನಾಯಕರಿಗೆ ಶುರು ಚಿಂತೆ ಶುರುವಾಗಿದೆ. ಹಾಗಾದ್ರೆ ಈ ಅನುಮಾನ ಬರಲು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಪಾಸ್ ಮಾಡಿರುವ ಸಂದೇಶವೇನು ಎಂಬುದರ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
Advertisement
Advertisement
ವಂಶಾಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ, ಬಿಜೆಪಿ ವಂಶಾಡಳಿತ ವಿರೋಧಿ. ಪಂಚ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿಯೇ ಸಂಸದರ ಮಕ್ಕಳಿಗೆ ಟಿಕೆಟ್ ನೀಡಿಲ್ಲ. ಟಿಕೆಟ್ ನಿರಾಕರಣೆ ಮಾಡಿದ್ದ ಆ ನಿರ್ಧಾರ ನನ್ನದೇ ಎಂದು ಮೋದಿ ಸಭೆಯಲ್ಲಿ ಹೇಳಿದ್ದರು. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ
Advertisement
ಮೋದಿ ಮಾತಿನಿಂದ ಮುಂದಿನ ಚುನಾವಣೆಗೆ ಮಕ್ಕಳನ್ನ ಕಣಕ್ಕಿಳಿಸಲು ಮಾಡಿದ್ದ ರಾಜ್ಯ ನಾಯಕರ ಪ್ಲಾನ್ ಪ್ಲಾಪ್ ಆದಂತಾಗಿದೆ. ಮೋದಿ ಮಾತಿನಿಂದ ‘ಫ್ಯಾಮಿಲಿ ಪಾಲಿಟಿಕ್ಸ್’ ರಾಜ್ಯ ನಾಯಕರು ದಂಗಾಗಿದ್ದಾರೆ. ಯಾಕೆಂದರೆ ರಾಜ್ಯದಲ್ಲಿ ಡಜನ್‍ಗಟ್ಟಲೇ ನಾಯಕರ ಮಕ್ಕಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿಯಾಗಿದ್ದಾರೆ.
Advertisement
ರಾಜ್ಯ ಬಿಜೆಪಿಯಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ವಿವರ ಇಂತಿದೆ:
* ಯಡಿಯೂರಪ್ಪ, ಮಾಜಿ ಸಿಎಂ
> ಪುತ್ರ ಬಿ.ವೈ ರಾಘವೇಂದ್ರ, ಶಿವಮೊಗ್ಗ ಸಂಸದ
> ಪುತ್ರ ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ
* ಉಮೇಶ್ ಜಾಧವ್, ಕಲಬುರಗಿ ಸಂಸದ
> ಅವಿನಾಶ್ ಜಾಧವ್, ಶಾಸಕ
* ಶಶಿಕಲಾ ಜೊಲ್ಲೆ, ಸಚಿವೆ
> ಅಣ್ಣಾ ಸಾಹೇಬ್ ಜೊಲ್ಲೆ, ಸಂಸದ
* ಈಶ್ವರಪ್ಪ, ಸಚಿವ
> ಕಾಂತೇಶ್, ಪುತ್ರ, ಜಿ.ಪಂ. ಸದಸ್ಯ
* ಗೋವಿಂದ ಕಾರಜೋಳ, ಸಚಿವ
> ಗೋಪಾಲ್, ಕಾರಜೋಳ ಪುತ್ರ
* ಸೋಮಣ್ಣ, ಸಚಿವ
ಅರುಣ್, ಸೋಮಣ್ಣ ಪುತ್ರ
* ಡಿ.ಹೆಚ್.ಶಂಕರ ಮೂರ್ತಿ, ಮಾಜಿ ಸಭಾಪತಿ
> ಡಿ.ಎಸ್.ಅರುಣ್, ಶಂಕರಮೂರ್ತಿ ಪುತ್ರ
* ಬಸವರಾಜ್, ಸಂಸದ
> ಜ್ಯೋತಿ ಗಣೇಶ್, ಬಸವರಾಜ್ ಪುತ್ರ, ಶಾಸಕ
* ರವಿಸುಬ್ರಹ್ಮಣ್ಯ, ಶಾಸಕ
> ತೇಜಸ್ವಿ ಸೂರ್ಯ, ರವಿಸುಬ್ರಹ್ಮಣ್ಯ ಅಣ್ಣನ ಮಗ, ಸಂಸದ
* ರಮೇಶ್ ಜಾರಕಿಹೊಳಿ, ಶಾಸಕ
> ಬಾಲಚಂದ್ರ, ಜಾರಕಿಹೊಳಿ ಸಹೋದರ, ಶಾಸಕ
* ಮುರುಗೇಶ್ ನಿರಾಣಿ, ಶಾಸಕ
> ಹನುಮಂತ, ನಿರಾಣಿ ಸಹೋದರ, ಪರಿಷತ್ ಸದಸ್ಯ
* ಜಗದೀಶ್ ಶೆಟ್ಟರ್, ಮಾಜಿ ಸಿಎಂ
> ಪ್ರದೀಪ್, ಶೆಟ್ಟರ್ ಸಹೋದರ, ಪರಿಷತ್ ಸದಸ್ಯ
* ಉಮೇಶ್ ಕತ್ತಿ, ಸಚಿವ
> ರಮೇಶ್ ಕತ್ತಿ, ಕತ್ತಿ ಸಹೋದರ, ಮಾಜಿ ಸಂಸದ
* ಕರುಣಾಕರ್ ರೆಡ್ಡಿ, ಶಾಸಕ
> ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ ಸಹೋದರ, ಶಾಸಕ
* ರಾಮಚಂದ್ರೇಗೌಡ, ಮಾಜಿ ಪರಿಷತ್ ಸದಸ್ಯ
> ಸಪ್ತಗಿರಿಗೌಡ, ರಾಮಚಂದ್ರೇಗೌಡ ಪುತ್ರ, 2018ರ ಗಾಂಧಿನಗರ ಅಭ್ಯರ್ಥಿ
* ಶ್ರೀರಾಮುಲು, ಸಚಿವ
> ಸುರೇಶ್ ಬಾಬು, ರಾಮುಲು ಸೋದರಳಿಯ, 2018ರ ಕಂಪ್ಲಿ ಅಭ್ಯರ್ಥಿ
* ಆರ್.ಅಶೋಕ್, ಸಚಿವ
> ರವಿ, ಅಶೋಕ್ ಸೋದರ ಸಂಬಂಧಿ, 2018ರ ಬ್ಯಾಟರಾಯನಪರ ಅಭ್ಯರ್ಥಿ
* ದಿವಂಗತ ಸಿ.ಎಂ.ಉದಾಸಿ, ಶಾಸಕ
> ಶಿವಕುಮಾರ್ ಉದಾಸಿ, ಸಂಸದ ಇದನ್ನೂ ಓದಿ: ಜೋಕರ್ ಹೋಲಿಕೆಗೆ ದಿ ಕಾಶ್ಮೀರ್ ಫೈಲ್ಸ್ ನಟ ಅನುಪಮ್ ಖೇರ್ ಮೆಚ್ಚುಗೆ
ಒಟ್ಟಿನಲ್ಲಿ ಇದೀಗ ಮೋದಿ ನೀಡಿರುವ ಹೇಳಿಕೆಯಿಂದ ಮುಂದಿನ ಚುನಾವಣೆಗೆ ಮಕ್ಕಳನ್ನ ಕಣಕ್ಕಿಳಿಸಲು ಪ್ಲ್ಯಾನ್ ಮಾಡಿರುವ ರಾಜ್ಯ ನಾಯಕರುಗಳಿಗೆ ಶಾಕ್ ಆದಂತಾಗಿದ್ದು, ಫ್ಯಾಮಿಲಿ ಪಾಲಿಟಿಕ್ಸ್ ಗೆ ರಾಜ್ಯದಲ್ಲೂ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕ್ತಾರೋ ಎಂಬುದನ್ನು ಕಾದುನೋಡಬೇಕಿದೆ.