ಮಡಿಕೇರಿ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By Election) ಕುಟುಂಬ ರಾಜಕಾರಣಕ್ಕೆ ಈ ಚುನಾವಣೆ ಅಂತ್ಯ ಹಾಡಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ (AS Ponnanna) ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕುಟುಂಬ ರಾಜಕಾರಣ ಇದೆ ಅಲ್ಲ. ಸ್ವಾರ್ಥದ ಕಡೆಗೆ ಹೋದಾಗ ಅದು ಅಂತ್ಯವಾಗುತ್ತದೆ. ಇದರ ಅಂತ್ಯವನ್ನು ನಾವು ಚನ್ನಪಟ್ಟಣದಲ್ಲಿ ಕಾಣುತ್ತೇವೆ. ಯೋಗೇಶ್ವರ್ (CP Yogeshwar) ಅವರು ತಳಮಟ್ಟದಿಂದ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡು ಅಲ್ಲಿನ ಜನರ ಬಾಂಧವ್ಯ ಇಟ್ಟುಕೊಂಡಿರುವ ರಾಜಕಾರಣಿ. ಅವರು ಅವಕಾಶವಾದಿ ಅಲ್ಲ. ಅವರು ಅವಕಾಶಕ್ಕಾಗಿ ರಾಜಕಾರಣ ಮಾಡುತ್ತಿರುವ ವ್ಯಕ್ತಿಯೂ ಅಲ್ಲ. ಯಾರು ಅವಕಾಶದ ರಾಜಕಾರಣ ಮಾಡುತ್ತಿದ್ದಾರೆ ಅಂತ ಅಲ್ಲಿನ ಜನರು ಗಮನಿಸುತ್ತಿದ್ದಾರೆ. ಈಗಾಗಲೇ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ ಗ್ಲೈಡರ್ – ಪ್ರವಾಸಿಗ ದುರ್ಮರಣ
Advertisement
Advertisement
ಎಲ್ಲೋ ಒಂದು ಕಡೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಪ್ರಯತ್ನಗಳು ನಡೆದು ಕೆಲವು ಸಂದರ್ಭದಲ್ಲಿ ಯಶಸ್ಸು ಆದರೂ ಕೂಡ ಈ ಚುನಾವಣೆಯಲ್ಲಿ ಇದು ಮುಗಿಯುತ್ತದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಮತ್ತಷ್ಟು ಬಲವಾಗಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ತನ್ನ ಕೆಲಸವನ್ನು ಮಾಡುತ್ತದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು ಖಚಿತ. ನಿಖಿಲ್ ಕುಮಾರಸ್ವಾಮಿ ಒಬ್ಬ ಅಭ್ಯರ್ಥಿ ಅಷ್ಟೇ. ಜೆಡಿಎಸ್‌ನ ರಾಜಕಾರಣವನ್ನು ಅಲ್ಲಿನ ಜನರು ಗುರುತಿಸಿ ಅವರನ್ನು ಸೋಲಿಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ: ಆರ್.ಅಶೋಕ್
Advertisement