ಅವಳಿನ್ನೂ ಮುಸಲ್ಮಾನಳಲ್ಲ, ಪಾಕಿಸ್ತಾನಕ್ಕೆ ಬರೋದು ಬೇಡ – ಪಾಕ್ ಮಹಿಳೆ ಪೋಷಕರ ಫಸ್ಟ್ ರಿಯಾಕ್ಷನ್

Public TV
2 Min Read
bangladesh women 1

ಇಸ್ಲಾಮಾಬಾದ್: ಪಬ್‌ಜಿ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್ ಇದೀಗ ತಮ್ಮ ಕುಟುಂಬ ಹಾಗೂ ನೆರೆಹೊರೆಯವರಿಂದ ಬಹಿಷ್ಕಾರಕ್ಕೊಳಗಾಗಿದ್ದಾಳೆ. ಸೀಮಾ ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರು ಅವಳು ಪಾಕಿಸ್ತಾನಕ್ಕೆ (Pakistan) ವಾಪಸ್ ಬರೋದು ಬೇಡ ಎಂದು ಹೇಳಿದ್ದಾರೆ.

PUBG Love Story 2

ನಾಲ್ಕು ಮಕ್ಕಳ ಅವಿದ್ಯಾವಂತ ತಾಯಿ ಸೀಮಾ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಹಾಗೂ ಸಂಪ್ರದಾಯವಾದಿ ಸಮಾಜ ಎಲ್ಲವನ್ನ ತ್ಯಜಿಸಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಈಗ ಅವಳು ಮುಸಲ್ಮಾನಳಲ್ಲ, ಬೇಕಿದ್ದರೆ ಅವಳು ತನ್ನ ನಾಲ್ಕು ಮಕ್ಕಳನ್ನ ಕಳುಹಿಸಬಹುದು. ಆದ್ರೆ ಸೀಮಾ ಮಾತ್ರ ಬರೋದು ಬೇಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್‌ ಮಹಿಳೆ

bangladesh women 11

ಗುಲಿಸ್ತಾನ್-ಎ-ಜೌಹರ್ ನಗರದ ಬಿತ್ತೈಯಾಬಾದ್‌ನಲ್ಲಿದ್ದ ಸೀಮಾ ಕಳೆದ ಮೂರು ವರ್ಷಗಳಿಂದ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಅವಳ ಸೋದರ ಮಾವ ನೂರ್ ಅಹ್ಮದ್ ಸ್ವಲ್ಪ ದೂರದಲ್ಲಿ ಮನೆ ಮಾಡಿಕೊಂಡಿದ್ದ. ಸೀಮಾ ಇದ್ದ ಜಾಗದಲ್ಲಿ ಹೆಚ್ಚು ಸೌಲಭ್ಯಗಳು ಇರಲಿಲ್ಲ. ಅಲ್ಲಿಯ ಸುತ್ತ ಮುತ್ತಲಿನ ವಾತಾವರಣವೂ ಅನೈರ್ಮಲ್ಯದಿಂದ ಕೂಡಿತ್ತು. ಇದೆಲ್ಲವನ್ನ ನೋಡಿದ್ದ ಪತಿ ಗುಲಾಮ್ ಹೈದರ್ ಆಕೆಗಾಗಿ ಸ್ವಂತ ಮನೆ ಮಾಡಲು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ 1.2 ಮಿಲಿಯನ್‌ಗೆ (12 ಲಕ್ಷ ಪಾಕಿಸ್ತಾನ ರೂಪಾಯಿ) ಮನೆಯೊಂದನ್ನು ಖರೀದಿಸಿದ್ದ. ಅಷ್ಟರಲ್ಲೇ ಸೀಮಾ ಭಾರತಕ್ಕೆ ಪಲಾಯನ ಮಾಡಿದ್ದಾಳೆ ಎಂದು ನೆರೆಹೊರೆಯವರಿಂದ ತಿಳಿದುಬಂದಿದೆ.

bangladesh women 111

ಸೀಮಾ ಒಂದು ದಿನ ಟ್ಯಾಕ್ಸಿಗೆ ಕರೆ ಮಾಡಿ ತನ್ನ ಮಕ್ಕಳೊಂದಿಗೆ ಲಗೇಜ್ ತುಂಬಿಕೊಂಡು ಹೊರಡುತ್ತಿದ್ದುದನ್ನ ನೋಡಿದೆವು. ಆಕೆ ಜಾಕೋಬಾಬಾದ್‌ನಲ್ಲಿರುವ ತನ್ನ ಹಳ್ಳಿಗೆ ಹೋಗುತ್ತಿದ್ದಾಳೆ ಅಂತಾ ನಾವು ಅಂದುಕೊಂಡಿದ್ದೆವು. ಆದ್ರೆ ಒಂದು ತಿಂಗಳ ನಂತರ ಆಕೆ ಭಾರತಕ್ಕೆ ಪಲಾಯನ ಮಾಡಿರುವುದು ಟಿವಿ ಮಾಧ್ಯಮಗಳಿಂದ ತಿಳಿದುಬಂದಿತು. ಅದನ್ನು ಕಂಡು ನಮ್ಮೆಲ್ಲರಿಗೂ ಆಘಾತವಾಯಿತು ಎಂದು ನೆರೆಯ ಜಮಾಲ್ ಜಕ್ರಾನಿ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

ಸೀಮಾ ಮತ್ತು ಗುಲಾಮ್ ಹೈದರ್ ಸಹ ಕಳೆದ 10 ವರ್ಷದ ಹಿಂದೆ ಕರಾಟಿಗೆ ಓಡಿ ಬಂದು ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು.

ಪಬ್‌ಜೀ ಪ್ರೇಮಕಥೆ (PUBG Love Story) ಶುರುವಾಗಿದ್ದೇ ಥ್ರಿಲ್ಲಿಂಗ್: ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು.

Web Stories

Share This Article