ಯಶ್ ನಟನೆಯ ಕಿರಾತಕ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಟರಾಗಿ ನಟಿಸಿರುವ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ. ಕಣ್ಣುದಾನ ಮಾಡಬೇಕು ಎನ್ನುವುದು ನಟನ ಅಪೇಕ್ಷೆ ಕೂಡ ಆಗಿತ್ತಂತೆ. ಹಾಗಾಗಿ ಬಾಲಾಜಿ ನಿಧನಾ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
Advertisement
ನಟ ಡೇನಿಯಲ್ ಬಾಲಾಜಿ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಡೇನಿಯಲ್ ಬಾಲಾಜಿ ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.
Advertisement
Advertisement
48 ವರ್ಷದ ನಟನ ಹಠಾತ್ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಬಾಲಾಜಿ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಡೇನಿಯಲ್ ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ‘ಮರುದುನಾಯಗಂ’ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ರಾಧಿಕಾ ಶರತ್‌ಕುಮಾರ್ ಅವರ ‘ಚಿತ್ತಿ’ ಯೊಂದಿಗೆ ದೂರದರ್ಶನಕ್ಕೆ ತೆರಳಿದರು. ಅಲ್ಲಿನ ಪಾತ್ರದ ಮೂಲಕ ಡೇನಿಯಲ್ ಎಂದು ಜನಪ್ರಿಯತೆ ಗಳಿಸಿದರು.
Advertisement
‘ಕಾಕ್ಕ ಕಾಕ್ಕ’ ಮತ್ತು ‘ವೆಟ್ಟಾಯಡು ವಿಲಾಯಡು’ ಚಿತ್ರಗಳಲ್ಲಿನ ಮರೆಯಲಾಗದ ನಟನೆಯು ಸಿನಿ ಜಗತ್ತಿನಲ್ಲಿ ಅವರ ಜನಪ್ರಿಯತೆಗೆ ಕಾರಣವಾಯಿತು. ನಟ ಡೇನಿಯಲ್ ಬಾಲಾಜಿ ಅವರು ಮಲಯಾಳಂ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಅವರು ಅಭಿನಯಿಸಿದ ಕೊನೆಯ ಚಿತ್ರ ‘ಅರಿಯವನ್’.