ಮಧುರೈ: ಹಣಕಾಸಿನ ಸಮಸ್ಯೆಯಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 8 ಜನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, 6 ಜನ ಮೃತಪಟ್ಟಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಭಾನುವಾರ ಈ ಘಟನೆ ನಡೆದಿದ್ದು, ಮನೆ ಬಾಗಿಲು ಒಡೆದು ನೋಡಿದಾಗ 8 ಜನ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದರು. ಆತ್ಮಹತ್ಯೆಗೆ ಕಾರಣ ಆಸ್ತಿ ಹಾಗೂ ಹಣಕಾಸಿನ ವಿಚಾರವಾಗಿ ಆತ್ಮಹತ್ಯೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ತನಿಖೆ ನಡೆದ ಬಳಿಕ ಕಾರಣ ಏನೆಂದು ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ಮೃತ ವೇಲ್‍ಮುರುಗನ್ ಮತ್ತು ಸಹೋದರ ಕುರಿಂಜಿ ಕುಮರನ್ ರಾನ್ ಯಗಪ್ಪನಗರದ ಶಾಲೆಯೊಂದನ್ನು ನಡೆಸುತ್ತಿದ್ದರು. ಶಾಲೆ ನಡೆಸಲು ಸಾಲ ಮಾಡಿದ್ದರಿಂದ ಮರು ಪಾವತಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಭಾನುವಾರ ಇಬ್ಬರು ಸಹೋದರರು, ತಾಯಿ ಜೆಯಜ್ಯೋತಿ, ಮಗಳು ಜೆಯ ತರಣಿ, ವೇಲ್‍ಮುರುಗನ್ ಮಗಳು ಜೆಯಾ ಸಕ್ತಿ ಮತ್ತು ದೇವಿ ಮೃತ ಪಟ್ಟಿದ್ದಾರೆ. ಕುಮಾರನ್ ಪತ್ನಿ ತಂಗಸೆಲ್ವಿ ಮತ್ತು ಮಗಳು ಜೆಯಾ ಮೊನಿಕಾ ಬದುಕುಳಿದಿದ್ದು ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
Advertisement
ಸ್ಥಳೀಯರ ಹೇಳಿಕೆ ಪ್ರಕಾರ ಕುಟುಂಬದವರನ್ನು ಆಸ್ಪತ್ರೆಗೆ ಸಾಗಿಸಲು ತಕ್ಷಣ 108 ಆಂಬುಲೆನ್ಸ್ ಗೆ ಕರೆ ಮಾಡಲಾಗಿತ್ತು. ಆದರೆ ಆಂಬುಲೆನ್ಸ್ 45 ನಿಮಿಷ ತಡವಾಗಿ ಬಂದಿದೆ. 108 ಸಿಬ್ಬಂದಿಯ ನಿರ್ಲಕ್ಷ್ಯದಿಂದ 6 ಜನ ಮೃತಪಟ್ಟಿದ್ದಾರೆ ಎಂದು ನೆರೆ ಮನೆಯವ ರವಿಚಂದ್ರನ್ ಪ್ರತಿಕೆಯೊಂದಕ್ಕೆ ಹೇಳಿದ್ದಾರೆ.
Advertisement
ಘಟನೆ ಬಗ್ಗೆ ಮಧುರೈ ಜಿಲ್ಲಾಧಿಕಾರಿ ಕೆ.ವೀರ ರಾಘವ ರಾವ್ ಮಾತನಾಡಿದ್ದು, ಆಂಬುಲೆನ್ಸ್ ತಡವಾಗಿ ಬರಲು ಕಾರಣ ಮತ್ತು ಘಟನೆ ಬಗ್ಗೆ ತನಿಖೆ ನಡೆಸಲು ಈಗಾಗಲೇ ಆದೇಶ ನೀಡಲಾಗಿದೆ. ಮನೆಯ ಹಾಗೂ ನೆರೆಯವರನ್ನು ವಿಚಾರಣೆ ನಡೆಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದರು.