ಚೆನ್ನೈ: ತಮಿಳುನಾಡಿನ (Tamil Nadu) ದೇವಸ್ಥಾನದ ಪಟ್ಟಣ ತಿರುವಣ್ಣಾಮಲೈನಲ್ಲಿ ಎರಡನೇ ಭೂಕುಸಿತ ಸಂಭವಿಸಿದೆ. ಮೊದಲನೇ ಭೂಕುಸಿತದಲ್ಲಿ ವಸತಿ ಕಟ್ಟಡದ ಮೇಲೆ ಬಂಡೆಯೊಂದು ಕುಸಿದು, ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದರು.
ಭಾರೀ ಮಳೆಯಿಂದಾಗಿ ಪ್ರಸಿದ್ಧ ಅಣ್ಣಾಮಲೈಯಾರ್ ಬೆಟ್ಟದ ಕೆಳಗಿನ ಇಳಿಜಾರುಗಳಲ್ಲಿ ಭಾನುವಾರ ಸಂಜೆ 4:30 ಕ್ಕೆ ಈ ದುರಂತ ನಡೆದಿತ್ತು. ಇದನ್ನೂ ಓದಿ: ಸಂಸತ್ ಲೈಬ್ರರಿಯಲ್ಲಿ `ಸಾಬರಮತಿ ರಿಪೋರ್ಟ್’ ಸಿನಿಮಾ ವೀಕ್ಷಿಸಿದ ಮೋದಿ
Advertisement
Advertisement
ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಭಾರೀ ಮಳೆಯಿಂದ ಅಡಚಣೆಯಾಗಿದೆ. ಎರಡನೇ ಭೂಕುಸಿತ ಸ್ಥಳೀಯ ದೇವಸ್ಥಾನದ ಬಳಿಯ ಸ್ಥಳದಲ್ಲಿ ಸಂಭವಿಸಿದೆ.
Advertisement
ತಿರುವಣ್ಣಾಮಲ್ಲೈನಲ್ಲಿ ಘೋರ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಮಿಳುನಾಡು ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದನ್ನೂ ಓದಿ: Fengal Cyclone| ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯ – ಕೊಚ್ಚಿ ಹೋಯ್ತು ವಾಹನಗಳು
Advertisement
ರಾಜಕುಮಾರ್ ಎಂಬ ವ್ಯಕ್ತಿಯ ನಿವಾಸದ ಮೇಲೆ ಭಾನುವಾರ ಸಂಜೆ 4 ಗಂಟೆಗೆ ಗುಡ್ಡ ಕುಸಿದಿತ್ತು. ಭಾನುವಾರದಿಂದ ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ಮುಂದುವರೆದಿದೆ.