ಗಾಂಧಿನಗರ: ವಾಮಾಚಾರಕ್ಕೆ ಒಳಗಾದ ಕುಟುಂಬವೊಂದರ 3 ಮಂದಿ ನೇಣು ಹಾಕಿಕೊಂಡು, ಬುಧವಾರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್‍ನ ನರೋಡಾ ನಗರಲ್ಲಿ ನಡೆದಿದೆ.
ಕುನಾಲ್ ತ್ರಿವೇದಿ (50), ಪತ್ನಿ ಕವಿತಾ ತ್ರಿವೇದಿ ಹಾಗೂ ದಂಪತಿಯ ಪುತ್ರಿ ಶ್ರೀನ್ ತ್ರಿವೇದಿ (16) ಆತ್ಮಹತ್ಯೆ ಮಾಡಿಕೊಂಡವರು. ನಮ್ಮ ಕುಟುಂಬವು ವಾಮಾಚಾರಕ್ಕೆ ಒಳಗಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಅಂತಾ ಕುನಾಲ್ ತ್ರಿವೇದಿ ಬರೆದಿರುವ ಮರಣ ಪತ್ರವು ದೊರೆತಿದೆ ಎಂದು ಇನ್ಸ್‍ಪೆಕ್ಟರ್ ಎಚ್.ಬಿ.ವಾಘೇಲಾ ತಿಳಿದ್ದಾರೆ.
Advertisement
ತಮಗೆ ಯಾವುದೇ ಆರ್ಥಿಕ ತೊಂದರೆಯಿಲ್ಲ. ನಾವು ಮಧ್ಯಪ್ರದೇಶದ ವ್ಯಕ್ತಿಯೊಬ್ಬರಿಗೆ 14.5 ಲಕ್ಷ ರೂ. ನೀಡಿದ್ದೇವೆ ಎಂದು ಕುನಾಲ್ ಪತ್ರದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಮನೆಯ ಮೇಲೆ ವಾಮಾಚಾರ ಮಾಡಲಾಗಿದೆ ಅಂತಾ ಕುಟುಂಬಸ್ಥರಿಗೆ ಹೇಳಿದ್ದೆ. ಆದರೆ ಯಾರೊಬ್ಬರೂ ನನ್ನ ಮಾತನ್ನು ನಂಬಿರಲಿಲ್ಲ. ಮದ್ಯ ಸೇವನೆಯಿಂದ ಹೀಗೆ ನಾನು ಹೇಳುತ್ತಿರುವೆ ಅಂತಾ ಕುಟುಂಬದವರು ಅಂದುಕೊಂಡಿದ್ದರು ಎಂದು ಕುನಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Advertisement
ವಾಮಾಚಾರದಿಂದಲೇ ಮದ್ಯ ಸೇವನೆ ಪ್ರಾರಂಭಿಸಿದ್ದು ಎಂದು ಕುನಾಲ್ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ ಎಂದು ಇನ್ಸೆಪೆಕ್ಟರ್ ವಾಘೇಲಾ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv