ಬೆಂಗಳೂರು: ಜನ ಸೇವೆಯೇ ಜನಾರ್ದನ ಸೇವೆ ಅನ್ನೋದು ಹಳೇ ಮಾತು. ಸರ್ಕಾರಿ ಕೆಲಸಕ್ಕೆ ಕೊಟ್ಟಿರೋ ಕಾರು ಸ್ವಕಾರ್ಯಕ್ಕೂ ಬಳಕೆ ಇದು ಅಧಿಕಾರಿಗಳ ಮಾತು.
Advertisement
ಹೌದು. ಸರ್ಕಾರಿ ಕೆಲಸಕ್ಕೆ ಅಂತ ಕೊಟ್ಟಿರೋ ಕಾರನ್ನ ಸ್ವಂತ ಕೆಲಸಕ್ಕೆ ಅಧಿಕಾರಿಗಳು ಬಳಸುತ್ತಿರೋದು ಬೆಳಕಿಗೆ ಬಂದಿದೆ. ಐಪಿಎಲ್ ಮ್ಯಾಚ್ ನೋಡೋಕೆ ಅಧಿಕಾರಿಗಳು ತಮ್ಮ ಫ್ಯಾಮಿಲಿಗಾಗಿ ಸರ್ಕಾರಿ ಕಾರುಗಳನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ.
Advertisement
Advertisement
ಪೊಲೀಸ್ ಅಧಿಕಾರಿಗಳ ಕಾರು, ಸರ್ಕಾರಿ ವಾಹನಗಳು ಅಷ್ಟೇ ಅಲ್ಲ ಬಿಎಂಟಿಸಿ ಸಾರಥಿ ವಾಹನದಲ್ಲಿ ಸರ್ಕಾರಿ ಅಧಿಕಾರಿಗಳ ಕುಟುಂಬಸ್ಥರು ಐಪಿಎಲ್ ಮ್ಯಾಚ್ ನೋಡೋಕೆ ಹೋಗ್ತಾರೆ. ಈ ಎಲ್ಲಾ ದೃಶ್ಯಾವಳಿಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ವಿವಿಐಪಿ ಸಂಸ್ಕೃತಿ ಬೇಡ ಅನ್ನೋ ಕಾರಣಕ್ಕೆ ಕೇಂದ್ರ ಸರ್ಕಾರ ಹೊಸ ಕಾನೂನು ತಂದು ಅಧಿಕಾರಿಗಳು ಹಾಗೂ ಗಣ್ಯವ್ಯಕ್ತಿಗಳ ಕಾರಿನ ಮೇಲೆ ಕೆಂಪು ದೀಪ ಬಳಕೆ ನಿಷೇಧಿಸಿದೆ. ಕೇವಲ ತುರ್ತು ಸೇವೆ ಒದಗಿಸುವಂತಹ ವಾಹನಗಳಾದಂತಹ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳಲ್ಲಿ ಮಾತ್ರ ಕೆಂಪು ದೀಪ ಬಳಸಬಹುದಾಗಿದೆ.