ಗದಗ: ಲಕ್ಕುಂಡಿಯಲ್ಲಿ (Lakkundi) ನಿಧಿ ಸಿಕ್ಕ ಗ್ರಾಮದಲ್ಲಿ ಕುಟುಂಬವೊಂದು ನಾಲ್ಕು ಶತಮಾನಗಳಷ್ಟು ಹಳೆಯದಾದ ಈಶ್ವರನ ದೇವಾಲಯದೊಳಗೆ (Temple) ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ.
ಹೌದು, ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಶಿವಯ್ಯ ಹಾಗೂ ಶೇಖರಯ್ಯ ಚೌಕಿಮಠ ಎಂಬವರ ಕುಟುಂಬ ದೇವಸ್ಥಾನದೊಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ. ಈ ಮನೆಯಲ್ಲಿ ಸುಮಾರು 5-6 ಮಂದಿ ವಾಸ ಮಾಡುತ್ತಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಮನೆಯಿದೆ. ಅದರೊಳಗೆ ಈ ಐತಿಹಾಸಿಕ ದೇವಾಲಯವಿದೆ. ಇದನ್ನೂ ಓದಿ: ಚುಕ್ಕಿ ಜಿಂಕೆಗಳ ಸಾವು ಕೇಸ್ – ಕೊಳೆತ ತರಕಾರಿ, ಹಣ್ಣುಗಳ ಪೂರೈಕೆ ಆರೋಪ: ಶಾಸಕ ಬಸವಂತಪ್ಪ ಕಿಡಿ
ಈ ದೇವಾಲಯದೊಳಗೆ ನಾಲ್ಕನೇ ಶತಮಾತನದ ಶಿವನ ಮೂರ್ತಿಯಿದೆ. ಈ ಮೂರ್ತಿಯನ್ನೇ ಕುಟುಂಬದವರು ಆರಾಧಿಸುತ್ತಾ ಬಂದಿದ್ದಾರೆ. ಸುಮಾರು 5 ತಲೆಮಾರಿನಿಂದ ಈ ಕುಟುಂಬ ಇಲ್ಲಿ ವಾಸಿಸುತ್ತಿದೆ. ಬೇರೆ ಕಡೆ ನಿವೇಶನ ನೀಡಿದರೆ ಮಾತ್ರ ಸ್ಥಳಾಂತರಗೊಳ್ಳುತ್ತೇವೆ, ಇಲ್ಲವಾದರೆ ಸ್ಥಳಾಂತರವಾಗುವುದಿಲ್ಲ ಎಂದು ಕುಟುಂಬ ತಿಳಿಸಿದೆ. ಇದನ್ನೂ ಓದಿ: ಮಹಿಳೆಯರು ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸದೇ ಬನ್ನಿ – ಉಡುಪಿ ಶ್ರೀಕೃಷ್ಣ ಮಠದಲ್ಲಿ ಡ್ರೆಸ್‌ಕೋಡ್



