ಧಾರವಾಡ: ಜಿಲ್ಲೆಯ ಗಾಂಧಿನಗರದಲ್ಲಿ ಕುಟುಂಬವೊಂದು ಬರೋಬ್ಬರಿ 601 ಗಣೇಶನನ್ನು ಪ್ರತಿಷ್ಠಾಪನೆ ಮಾಡಿದೆ.
ನಾಗರತ್ನ ನಾಗೇಶ ತಲೇಕರ್ ಎಂಬವರ ಮನೆಯಲ್ಲಿ ಕಳೆದ 40 ವರ್ಷಗಳಿಂದ ಗಣಪನನ್ನು ಇಡಲಾಗುತ್ತಿದೆ. ಪ್ರತಿ ವರ್ಷ ಗಣಪನ ಸಂಖ್ಯೆ ಹೆಚ್ಚಾಗುತ್ತೆ. ಈ ವರ್ಷ ಇವರ ಮನೆಯಲ್ಲಿ 601 ಗಣಪನ ಮೂರ್ತಿಗಳು ಇವೆ. 1980ರಿಂದ ಇಲ್ಲಿವರೆಗೆ ಅವರು ಗಣಪನನ್ನು ಇಡುತ್ತಾ ಬಂದಿದ್ದು, ಮೈಸೂರಿನ ತ್ಯಾಗರಾಜ್ ಸರ್ಕಲ್‍ನಲ್ಲಿ 100 ಗಣೇಶನನ್ನು ಇಟ್ಟಿರುವುದನ್ನು ನೋಡಿ ಪ್ರೇರಣೆಯಿಂದ ಇವರು ಇಡುತ್ತಿದ್ದಾರೆ. ಮೊಟ್ಟ ಮೊದಲಿಗೆ ಇವರು 21 ಗಣೇಶನನ್ನು ಇಟ್ಟಿದ್ದಾರೆ. ನಂತರ ಅವುಗಳ ಸಂಖ್ಯೆ ಬೆಳೆಸುತ್ತಲೇ ಬಂದಿದ್ದಾರೆ. ಗಣೇಶನನ್ನು ಇಡೋದು ದೊಡ್ಡದಲ್ಲ. ಆದರೆ ಅದಕ್ಕೆ ತಕ್ಕಂತೆ ನಡೆಯಬೇಕು ಎಂದು ನಾಗರತ್ನ ಅವರು ಹೇಳುತ್ತಾರೆ.
Advertisement
Advertisement
ಈ ಎಲ್ಲಾ ಗಣೇಶನಿಗೆ ಪ್ರತಿದಿನ ಎರಡು ಬಾರಿ ಪೂಜೆ ಮಾಡುತ್ತಾರೆ. ದೊಡ್ಡ ಗಣಪನಿಗೆ ಒಂದು ಹೂವಿನ ಹಾರ ಹಾಕಿದ್ರೆ, ಉಳಿದ ಗಣೇಶಗಳಿಗೆ ಒಂದೊಂದು ಹೂವನ್ನು ಇಟ್ಟು ಪೂಜೆ ಮಾಡಲಾಗುತ್ತೆ. ಅದೇ ರೀತಿ 11 ದಿನ ಇವರ ಮನೆಯಲ್ಲಿ ಪೂಜೆ ಪುನಸ್ಕಾರ ಇದ್ದೇ ಇರುತ್ತೆ. ಇವರು ಇಷ್ಟೊಂದು ಗಣಪನನ್ನು ಇಡುವುದನ್ನು ನೋಡಿ ಜನರು ಕೂಡ ಆಶ್ಚರ್ಯ ಪಡುತ್ತಾರೆ. ಇವುಗಳನ್ನು ಅವರು ಹುಬ್ಬಳ್ಳಿಯ ಉದಯ ಎಂಬವರಿಂದ ತಯಾರಿಸಿ, ಒಟ್ಟು 600 ಗಣಪನಿಗೆ ಒಂದೂವರೆ ಲಕ್ಷ ಖರ್ಚು ಮಾಡುತ್ತಾರೆ. ಅದರ ಪೂಜೆ ಪುನಸ್ಕಾರಕ್ಕೆ ಖರ್ಚು ಬೇರೆ. ಇಷ್ಟೊಂದು ಭಕ್ತಿಯಿಂದ ಅವರು ಗಣೇಶನ ಪ್ರತಿಷ್ಠಾಪನೆ ಮಾಡಿದ್ದು ನೋಡುವುದೇ ಒಂದು ಮಜಾ.