ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadeesh) ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಆಪ್ತ ಸ್ನೇಹಿತ ಶ್ರೇಯಸ್ (Shreyas) ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಟಾಲಿವುಡ್ ನಟ ರಾಮ್‌ಚರಣ್‌ಗೆ ಗೌರವ ಡಾಕ್ಟರೇಟ್
ಸೌಂದರ್ಯ ಜಗದೀಶ್ ಅವರ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಸುಗುಣ ಆಸ್ಪತ್ರೆಗೆ ಸೇರಿಸಲಾಯಿತು. ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಜಗದೀಶ್ ಆತ್ಮಹತ್ಯೆಗೆ ಬೇರೆ ಏನು ಕಾರಣ ಇಲ್ಲ. ಸದ್ಯ ಎಂ.ಎಸ್ ರಾಮಯ್ಯದಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ಗೆಳೆಯ ಶ್ರೇಯಸ್ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದರು ಸೌಂದರ್ಯ ಜಗದೀಶ್. ಮಗಳ ಮದುವೆ ಸಂದರ್ಭದಲ್ಲಿ ಖುಷಿ ಖುಷಿಯಾಗಿಯೇ ಇದ್ದರು. ಇದೀಗ ಅವರ ಆತ್ಮಹತ್ಯೆಯ ಸುದ್ದಿ ಕೇಳಿ ಚಿತ್ರರಂಗದ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.
ಉದ್ಯಮಿಯಾಗಿದ್ದ ಜಗದೀಶ್ ಅವರು ಅಪ್ಪು & ಪಪ್ಪು, ಸ್ನೇಹಿತರು, ರಾಮ್ ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.