ಹಾಸನ: ಕೌಟುಂಬಿಕ ಕಲಹದಿಂದ (Family Feud) ಮನನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆ ಬೇಲೂರು (Belur) ತಾಲೂಕಿನ ಲಿಂಗಾಪುರ (Lingapura) ಗ್ರಾಮದಲ್ಲಿ ನಡೆದಿದೆ.
ಹರಿಣಾಕ್ಷಿ (40) ಆತ್ಮಹತ್ಯೆಗೆ ಶರಣಾದ ಮಹಿಳೆ. ಹರಿಣಾಕ್ಷಿ 16 ವರ್ಷಗಳ ಹಿಂದೆ ಲಿಂಗಾಪುರ ಗ್ರಾಮದ ಶೇಖರ್ ಜೊತೆ ವಿವಾಹವಾಗಿದ್ದರು. ಪತಿ ತನ್ನ ಪತ್ನಿಯನ್ನು ಸದಾ ಅನುಮಾನದಿಂದ ನೋಡುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಎರಡೂ ಕುಟುಂಬಗಳ ಹಿರಿಯರು ಹಲವು ಬಾರಿ ರಾಜಿ ಸಂಧಾನ ಕೂಡ ಮಾಡಿದ್ದರು. ಆದರೂ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಲೇ ಇತ್ತು. ಇದನ್ನೂ ಓದಿ: ಸರ್ಕಾರಿ ಬಸ್, ಆಟೋರಿಕ್ಷಾ ನಡುವೆ ಭೀಕರ ಅಪಘಾತ – 6 ಮಂದಿ ದುರ್ಮರಣ
ಇದರಿಂದ ಮನನೊಂದಿದ್ದ ಹರಿಣಾಕ್ಷಿ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಟಾಯ್ಲೆಟ್‌ಗೆ ಹೋಗಿದ್ದವಳು ಕೊನೆ ಕ್ಷಣದಲ್ಲಿ ಹಾಜರ್ – ಸಿಇಟಿಯಲ್ಲಿ ನಕಲಿ ವಿದ್ಯಾರ್ಥಿ, ತನಿಖೆಗೆ ಆದೇಶ