ತುಮಕೂರು: ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಕ್ತಾದಿಗಳು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಮಠದ ವೈದ್ಯರಾದ ಡಾ. ಪರಮೇಶ್ ಹೇಳಿದ್ದಾರೆ.
ಶ್ರೀಗಳ ಆರೋಗ್ಯದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೈದ್ಯರು, ಪ್ರತಿದಿನ ಶ್ರೀಗಳ ರಕ್ತತಪಾಸಣೆ ಮಾಡುತ್ತಿದ್ದೇವೆ. ಎರಡು ದಿನಗಳ ಹಿಂದೆ ರಕ್ತದಲ್ಲಿ ಸೋಂಕು ಇದೆ ಎಂಬ ಅಂಶ ಪತ್ತೆಯಾಗಿತ್ತು. ಈ ಸಂಂಬಂಧ ನಾವು ಈಗಾಗಲೇ ಚಿಕಿತ್ಸೆ ನೀಡಿದ್ದೇವೆ. ಚಿಕಿತ್ಸೆಯಿಂದಾಗಿ ಸೋಂಕಿನ ಪರಿಣಾಮ ಕಡಿಮೆ ಆಗುತ್ತಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಿದ್ರೆ ಸಂಪೂರ್ಣ ಸೋಂಕು ನಿವಾರಣೆ ಆಗಲಿದೆ. ಇಂದು ಬೆಳಗ್ಗೆ ಇಷ್ಟಲಿಂಗ ಪೂಜೆ ನರೆವೇರಿಸಿ ದ್ರವ ಆಹಾರ ಸೇವನೆ ಮಾಡಿದ್ದಾರೆ ಎಂದು ತಿಳಿಸಿದರು.
Advertisement
Advertisement
ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ 4ರಿಂದ 5 ವಾರ ಐಸಿಯುನಲ್ಲಿಯೇ ವಿಶ್ರಾಂತಿ ಮಾಡಬೇಕೆಂದು ಡಾ.ರೇಲಾ ಸಲಹೆ ನೀಡಿದ್ದರು. ಆದ್ರೆ ಶ್ರೀಗಳು ಮಠಕ್ಕೆ ಹೋಗಬೇಕೆಂದು ಹಠ ಹಿಡಿದ್ದರಿಂದ ಕರೆತರಲಾಯ್ತು. ಹಳೆ ಮಠದ ಕೊಠಡಿಯನ್ನು ಐಸಿಯು ಮಾದರಿಯಲ್ಲಿ ಬದಲಾಯಿಸಲಾಗಿದೆ. ಶ್ರೀಗಳಿಗೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಭಕ್ತಾದಿಗಳಲ್ಲಿ ವೈದ್ಯರು ಮನವಿ ಮಾಡಿಕೊಂಡರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv