ಚಾಮರಾಜನಗರ: ಕೌಟುಂಬಿಕ ಕಲಹದಿಂದ (Family Feud) ಬೇಸತ್ತು ಎರಡು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು (Hanur) ತಾಲೂಕಿನ ಮಹದೇಶ್ವರಬೆಟ್ಟ ಸಮೀಪದ ಕಾಡುಹೊಲ ಗ್ರಾಮದಲ್ಲಿ ನಡೆದಿದೆ.
ಸುಶೀಲ (30), ಆಕೆಯ ಮಕ್ಕಳಾದ ಚಂದ್ರು (8), ದಿವ್ಯ (11) ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾವಿಯ ದಡದಲ್ಲಿ ಚಪ್ಪಲಿ ಹಾಗೂ ತಾಳಿ ಇಟ್ಟು ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನ ಮಾಲೀಕ ನೀರು ತರಲು ಬಾವಿಯ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಅರೆಸ್ಟ್ – ಭಾರತಕ್ಕೆ ಹಸ್ತಾಂತರಿಸಲು ಸಿಬಿಐ ಮನವಿ
ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲೆ ಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಂಬೇಡ್ಕರ್‌ಗೆ ಕಾಂಗ್ರೆಸ್ ಭಾರತರತ್ನ ಕೊಟ್ಟಿಲ್ಲ, ಬಿಜೆಪಿ ಬೆಂಬಲಿತ ಸರ್ಕಾರದಿಂದ ಗೌರವ: ವಿಜಯೇಂದ್ರ