ಜೈಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನಾಲ್ವರು ಮಕ್ಕಳನ್ನು ತಳ್ಳಿ ತಾನು ಬಾವಿಗೆ ಹಾರಿದ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಒಂದು ತಿಂಗಳ ಮಗು ಸೇರಿದಂತೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ತಾಯಿ ಮತಿಯಾ(32) ಅವರನ್ನು ಸ್ಥಳೀಯರು ಬದುಕಿಸಿದ್ದಾರೆ. ಕೋಮಲ್ (4), ರಿಂಕು (3), ರಾಜ್ವೀರ್ (2) ಮತ್ತು ದೇವರಾಜ್ (ಒಂದು ತಿಂಗಳು) ಮೃತ ಮಕ್ಕಳೆಂದು ಗುರುತಿಸಲಾಗಿದೆ. ಇಂದು ನಾಲ್ವರು ಮಕ್ಕಳ ಶವಗಳನ್ನು ಬಾವಿಯಿಂದ ಹೊರೆತೆಗೆಯಲಾಗಿದೆ. ಇದನ್ನೂ ಓದಿ: ನಡೆಯುತ್ತಿದ್ದಂತೆ ಕುಸಿದ ಫುಟ್ಪಾತ್ – ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು
ಮಂಗಲಿಯವಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮತಿಯ ಪತಿ ಬೋಡುರಾಮ್ ಗುರ್ಜರ್ ಒಬ್ಬ ರೈತ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ