– 903 ದಂಪತಿಗಳು ಒಂದಾದ್ರು
ಮುಜಾಫರ್‍ನಗರ್: 327 ಕೆಲಸದ ದಿನಗಳಲ್ಲಿ ಒಟ್ಟು 6065 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಉತ್ತರಪ್ರದೇಶದ ಮುಜಾಫರ್‍ನಗರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಜಿಲ್ಲೆಯಲ್ಲಿ ವಕೀಲರ ಪ್ರತಿಭಟನೆಯ ನಡುವೆಯೂ 327 ದಿನಗಳಲ್ಲಿ 6065 ಕೇಸ್‍ಗಳನ್ನು ಬಗೆಹರಿಸಿದ್ದೇನೆ ಎಂದು ನ್ಯಾಯಾಧೀಶರಾದ ತೇಜ್ ಬಹದ್ದೂರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.
Advertisement
ತೇಜ್ ಬಹದ್ದೂರ್ ಅವರ ಈ ದಾಖಲೆ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನ ಪುಟ ಸೇರಿರುವುದನ್ನು ಗಿನ್ನೀಸ್ ರೆಕಾಡ್ರ್ಸ್‍ನವರು ಸ್ಪಷ್ಟಪಡಿಸಿದ್ದಾರೆಂದು ವರದಿಯಾಗಿದೆ.
Advertisement
Advertisement
ಕೋರ್ಟ್ ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನ ಕಡಿಮೆ ಮಾಡಿ ಕಕ್ಷಿಗಾರರಿಗೆ ನ್ಯಾಯ ಒದಗಿಸುವುದು ನನ್ನ ಉದ್ದೇಶ ಎಂದು ನ್ಯಾಯಾಧೀಶರಾದ ಸಿಂಗ್ ಹೇಳಿದ್ದಾರೆ. ಇಡೀ ದೇಶದಲ್ಲಿ ವಿಲೇವಾರಿ ಮಾಡಲಾದ ಕೇಸ್‍ಗಳಲ್ಲಿ ಇದು ಅತ್ಯಂತ ಹೆಚ್ಚಿನದ್ದು. ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್ ಬಗೆಹರಿದ ನಂತರ ಒಟ್ಟು 903 ದಂಪತಿಗಳು ಒಂದಾಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.