– ಶೀಘ್ರವೇ ಸರ್ಕಾರದಿಂದ ಕುಟುಂಬಕ್ಕೆ ಪರಿಹಾರ
ಮಂಡ್ಯ: ಸಾಲಬಾಧೆಯಿಂದ ಮನನೊಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ಗ್ರಾಮದ ರೈತ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವ ಪುಟ್ಟರಾಜು ಸಂತಾಪ ಸೂಚಿಸಿದ್ದು, ಯಾವ ರೈತರು ಈ ರೀತಿಯ ಘಟನೆಗೆ ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ.
ನಗರದ ಕುಂತಿಬೆಟ್ಟದಲ್ಲಿ ಮಾತನಾಡಿದ ಅವರು, ಆತ್ಮಹತ್ಯೆಗೆ ಶರಣಾದ ಕುಟುಂಬದ ಯಜಮಾನ ರೈತ ನಂದೀಶ್ ಎರಡು ಬಾರಿ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಕಷ್ಟ ಹೇಳಿಕೊಂಡಿದ್ದರು. ತಕ್ಷಣ ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ ರೈತನ ಕಷ್ಟದ ಬಗ್ಗೆ ತಿಳಿಸಿದ್ರು. ಹೀಗಾಗಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ರೈತ ನಂದೀಶ್‍ನನ್ನು ಭೇಟಿ ಮಾಡಿ ಕಷ್ಟ ಪರಿಹರಿಸುವ ಭರವಸೆ ನೀಡಿದ್ದೆವು. ಇದನ್ನೂ ಓದಿ: ತಾಳ್ಮೆಯಿಂದ ಇರುವಂತೆ ಹೇಳಿದ್ದೆ, ಆದ್ರೆ ದುಡುಕಿನ ನಿರ್ಧಾರ – ಮಂಡ್ಯ ರೈತನ ಆತ್ಮಹತ್ಯೆ ಬಗ್ಗೆ ಸಿಎಂ ವಿಷಾದ
Advertisement
Advertisement
ಅಷ್ಟೇ ಅಲ್ಲದೇ ರೈತ ಕುಟುಂಬಕ್ಕೆ ಸಾಲ ನೀಡಿ ಕಿರುಕುಳ ನೀಡುತ್ತಿದ್ದವರಿಗೂ ಎಚ್ಚರಿಕೆ ನೀಡಿ ನಂದೀಶ್‍ಗೆ ಧೈರ್ಯ ತುಂಬಲಾಗಿತ್ತು. ಆದರೂ ರೈತ ನಂದಿಶ್ ಹೆಂಡತಿ ಮಕ್ಕಳೊಂದಿಗೆ ಸಾಮಾಹಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ರೀತಿ ಆಗಬಾರದಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಶವಗಳನ್ನು ಕಾರ್ಪೊರೇಶನ್ ನಲ್ಲಿ ಬಿಸಾಕಿ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
Advertisement
ಆತ್ಮಹತ್ಯೆಗೆ ಶರಣಾದ ರೈತ ನಂದೀಶ್ ತಂದೆ ತಾಯಿ ವೃದ್ಧರಾಗಿದ್ದಾರೆ. ಸಾಲ ಕೊಟ್ಟವರು ವೃದ್ಧ ತಂದೆತಾಯಿಗೆ ಹಣದ ವಿಚಾರದಲ್ಲಿ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದ ಅವರು, ಆದಷ್ಟು ಬೇಗ ಸರ್ಕಾರದಿಂದ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಯಾವ ರೈತರು ಈ ರೀತಿಯ ಕೆಟ್ಟ ನಿರ್ಧಾರ ಮಾಡಬಾರದು ಎಂದು ಸಚವ ಪುಟ್ಟರಾಜು ಮನವಿ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv