ಜೂನ್ 1, 2023ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ಭಾರೀ ಏರಿಕೆಯಾಗಲಿದೆ. ಇದಕ್ಕೆ ಕಾರಣ ಏನೆಂದರೆ ಕೇಂದ್ರ ಸರ್ಕಾರ FAME II ಸಬ್ಸಿಡಿಯನ್ನು ಪ್ರತಿ ಕಿಲೋವ್ಯಾಟ್‌ಗೆ 5 ಸಾವಿರ ಕಡಿತಗೊಳಿಸಿದೆ. ಹೊಸ ಅಧಿಸೂಚನೆ ಬರುವ ಮುನ್ನ FAME II ಸಬ್ಸಿಡಿ ಪ್ರತಿ ಕಿಲೋವ್ಯಾಟ್‌ಗೆ 15 ಸಾವಿರ ರೂ. ಇತ್ತು.
Advertisement
ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದ್ದರೂ ಪೆಟ್ರೋಲ್ ವಾಹನಗಳಿಗಿಂತ ಅವು ದುಬಾರಿ. ಈಗ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿರುವುದರಿಂದ ಅವುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗೋದಂತೂ ಗ್ಯಾರಂಟಿ. ಇದನ್ನೂ ಓದಿ: ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!
Advertisement
Advertisement
ಈ ಪರಿಷ್ಕರಣೆಯ ಪರಿಣಾಮವಾಗಿ, FAME II ಸಬ್ಸಿಡಿಗೆ ಅರ್ಹವಾಗಿರುವ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ತಮ್ಮ ಉತ್ಪನ್ನದ ಬೆಲೆಗಳನ್ನು ಸರಿಸುಮಾರು 25.000-35,000 ರೂ.ಗಳಷ್ಟು ಹೆಚ್ಚಿಸಬೇಕಾಗುತ್ತದೆ. ಉದಾಹರಣೆಗೆ, ಏಥರ್ 450X ಮತ್ತು OLA S1 Proಗೆ ಲಭ್ಯವಿರುವ ಸಬ್ಸಿಡಿ ಮೊತ್ತವು ಪ್ರಸ್ತುತ ರೂ 55,000-60,000ದ ನಡುವೆ ಇದೆ ಮತ್ತು ಪರಿಷ್ಕೃತ ದರಗಳೊಂದಿಗೆ, ಸಬ್ಸಿಡಿ ಮೊತ್ತವನ್ನು ಅರ್ಧಕ್ಕಿಂತ ಹೆಚ್ಚುಗೊಳಿಸಬೇಕಾದ ಅನಿವಾರ್ಯತೆ ತಯಾರಕರದ್ದು. ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರತಿ ತಿಂಗಳು ಇಳಿಮುಖವಾಗುತ್ತಿರುವಾಗ, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮಾರಾಟ ಇನ್ನಷ್ಟು ಕಡಿಮೆಯಾಗುವ ಸಂಭವವಿದೆ.
Advertisement
ನಿಮಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬೇಕು ಎಂಬ ಆಸೆ ಇದ್ದಲ್ಲಿ ಮೇ 31ರ ಒಳಗೆ ಕೊಂಡುಕೊಳ್ಳಿ ಮತ್ತು FAME II ಸಬ್ಸಿಡಿಯ ಪೂರ್ಣ ಲಾಭವನ್ನು ಪಡೆದುಕೊಳ್ಳಿ. ಇದನ್ನೂ ಓದಿ: Harley-Davidson Pan America 1250 ಅಡ್ವೆಂಚರ್ ಸ್ಪೆಷಲ್ ಬೈಕ್ ಭಾರತದಲ್ಲಿ ಬಿಡುಗಡೆ