ದಾವಣಗೆರೆ: ದೇಶದೆಲ್ಲೆಡೆ ಗಣೇಶ ಚತುರ್ಥಿಗೆ ಭರ್ಜರಿಯಾಗಿ ಆಚರಣೆ ನಡೆಯುತ್ತಿದೆ. ಅಲ್ಲದೆ ಈಗಾಗಲೇ ಬಹುತೇಕ ಗಣೇಶ ಮೆರವಣಿಗೆಗಳು ಮುಗಿದು ಹೋಗಿವೆ. ಆದರೆ ದಾವಣಗೆರೆಯಲ್ಲಿ ಮಾತ್ರ ಇನ್ನೂ ಡಿಜೆಗಾಗಿ ಫೈಟಿಂಗ್ ಮಾಡುತ್ತಲೇ ಇದ್ದಾರೆ. ಇತ್ತ ಡಿಜೆಯನ್ನೇ ರಾಜಕೀಯವಾಗಿ ಬಳಕೆ ಮಾಡಿದಕೊಂಡ ರಾಜಕಾರಣಿಗಳು ಡಿಜೆಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಅಲ್ಲದೆ ಯುವ ಜನತೆಯಲ್ಲಿ ಗೊಂದಲ ಸೃಷ್ಟಿ ಮಾಡುವ ಕೆಲಸಗಳಾಗುತ್ತಿವೆ.
ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davanagere) ಗಣೇಶ ಮೆರವಣಿಗೆಯಲ್ಲಿ ಸೃಷ್ಟಿಯಾದ ಡಿಜೆ (DJ) ಗೊಂದಲ, ಗಣೇಶ ಪ್ರತಿಷ್ಠಾಪನೆಗಿಂತ ಮುಂಚಿತವಾಗಿ ದಾವಣಗೆರೆ ಯುವಜನತೆ ಡಿಜೆ ಹಾಕಿ ಅದ್ದೂರಿಯಾಗಿ ಗಣೇಶ ಮೆರವಣಿಗೆ ಮಾಡಿ ಎಂಜಾಯ್ ಮಾಡಿಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಕಳೆದ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಬೇತೂರು ರಸ್ತೆಯಲ್ಲಿ ಕಲ್ಲು ತೂರಾಟವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಈದ್ ಮಿಲಾದ್ ಹಾಗೂ ಗಣೇಶ ಮೆರವಣಿಗೆಯಲ್ಲಿ ಡಿಜೆ ಯನ್ನು ಸಂಪೂರ್ಣ ಬ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ 60% ಕಮಿಷನ್, ಅಧ್ಯಕ್ಷರಿಂದಲೇ ಬೇಡಿಕೆ – ವಿಡಿಯೋ ರಿಲೀಸ್
ಇದರಿಂದ ಯುವಜನತೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಡಿಜೆ ಮಾಲೀಕರು ಹಾಗೂ ಯುವಜನತೆ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಡಿಜೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಸಚಿವರು ಡಿಸಿ, ಎಸ್‌ಪಿ ನಿರ್ಧಾರ ಮಾಡುತ್ತಾರೆ ವಿನಃ ನಾನೇನು ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ. ಆದರೆ ಇತ್ತ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತ್ರ ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ನೀಡೋದಿಲ್ಲ. ಈಗಾಗಲೇ ಆದೇಶ ಹೊರಡಿಸಿದ್ದು, ಅದೇಶವನ್ನು ಮೀರಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ
ಇನ್ನು, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಡಿಜೆಗೆ ಪರ್ಮಿಷನ್ ನೀಡಲಾಗಿದೆ ಎಂದು ವೈರಲ್ ಆಗುತ್ತಿದ್ದು, ಇದನ್ನು ನಂಬಿ ಬಸವನಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಡಿಜೆ ಹಾಕಿದ್ದು, ಪೊಲೀಸರು ಡಿಜೆ ಸೌಂಡ್ ಸಿಸ್ಟಮ್ ಹಾಗೂ ಲಾರಿಯನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆದರೆ ಸುಖಾ ಸುಮ್ಮನೆ ರಾಜಕೀಯ ಮುಖಂಡರು ಡಿಜೆಗೆ ಅನುಮತಿ ನೀಡಲಾಗಿದೆ. ಇದು ನಮ್ಮ ಹೋರಾಟದ ಫಲ ಎಂದು ಪೋಸ್ಟ್ರ್‌ಗಳನ್ನು ಹಾಕುತ್ತಿದ್ದು. ಇದು ಗೊಂದಲವನ್ನು ಸೃಷ್ಟಿ ಮಾಡಿದೆ. ಆದರೆ ಡಿಜೆಗೆ ಮಾತ್ರ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ನೀಡಿಲ್ಲ. ಇದರಿಂದ ಯುವಜನತೆ ಗೊಂದಲದಲ್ಲಿ ಇದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳು ಮಾಡಿದ ಆದೇಶ ವಾಪಪ್ ಪಡೆಯಲು ಆಗೋದಿಲ್ಲ. ಡಿಜೆ ಹಾಕುವುದರಿಂದ ಪರಿಸರಕ್ಕೆ ತೊಂದರೆಯಾಗುವುದರ ಜೊತೆಗೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಸುಖಾಸುಮ್ಮನೆ ಯುವಜನತೆಯಲ್ಲಿ ಗೊಂದಲ ಮೂಡಿಸುವುದನ್ನು ರಾಜಕೀಯ ಮುಖಂಡರು ಬಿಡಬೇಕು ಎಂದು ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಜಿಲ್ಲಾಡಳಿತ ಡಿಜೆಗೆ ಅನುಮತಿ ನೀಡಿಲ್ಲ. ಏನಾದರೂ ರಾಜಕೀಯ ಮುಖಂಡರ ಮಾತು ನಂಬಿ ಡಿಜೆ ಹಾಕಿದ್ರೆ ಕೇಸ್ ಬೀಳೋದಂತು ಗ್ಯಾರಂಟಿ.