ಬೆಂಗಳೂರು/ಬೆಳಗಾವಿ: ನಿರ್ವಾಹಕನ ಮೇಲಿನ ಪ್ರಕರಣದ ಬಳಿಕ ಪೋಕ್ಸೋ ಕೇಸ್ ಹಾಕಿದ್ದರು, ಅದು ಸುಳ್ಳು ಕೇಸ್ ಎಂದು ನಾನು ಮೊದಲೇ ಹೇಳಿದ್ದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು.
ಸಿಎಂ ಸಿದ್ದರಾಮಯ್ಯಗೆ (CM Siddaramaiah) ವರದಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದ್ವೇಷಕ್ಕಾಗಿ ಒತ್ತಡ ಹೇರಿ ನಿರ್ವಾಹಕನ ಮೇಲೆ ಪೋಕ್ಸೋ ಕೇಸ್ ಹಾಕಿಸಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಪೋಕ್ಸೋ ಕೇಸ್ ಸರಿ ಇಲ್ಲ ಎಂದಿದ್ದರು. ಈಗ ವಾಪಸ್ ಪಡೆದಿದ್ದಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬೆಳಗಾವಿ ಕಂಡಕ್ಟರ್ ಮೇಲೆ ಹಲ್ಲೆ : ಸಾರಿಗೆ ಸಚಿವರಿಂದ ಮಾಹಿತಿ ಪಡೆದ ಸಿಎಂ
ನಿನ್ನೆ ಬೆಳಗಾವಿಗೆ ಹೋಗಿದ್ದೆ, ನಿರ್ವಾಹಕನ ಆರೋಗ್ಯ ವಿಚಾರಿಸಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ 509 ಬಸ್ಸುಗಳು ಓಡಾಡುತ್ತಿವೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 130 ಬಸ್‌ಗಳು ಓಡಾಡ್ತಿವೆ. ನಮ್ಮಲ್ಲಿ ಒಂದು ಬಸ್‌ಗೆ ಮಸಿ ಬಳಿದಿದ್ದಾರೆ. ಅದಾದ ಬಳಿಕ ಕನ್ನಡ ಸಂಘಟನೆಗಳು ಮಸಿ ಬಳಿದಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಬಸ್‌ಗಳ ಮೇಲೆ ಮಸಿ ಬಳಿಯುವುದು, ನಿರ್ವಾಹಕನಿಗೆ ಮಸಿ ಬಳಿಯುವುದು ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಗಮನಕ್ಕೆ ಎಲ್ಲವನ್ನೂ ತಂದಿದ್ದೇನೆ ಎಂದರು.
ಮಹಾರಾಷ್ಟ್ರಕ್ಕೆ ನಮ್ಮ ರಾಜ್ಯದಿಂದ ಬಸ್ ಹೋಗ್ತಿಲ್ಲ, ಅಲ್ಲಿನ ಸಿಎಸ್, ಡಿಜಿಪಿ ಜೊತೆ ನಮ್ಮ ಸಿಎಸ್ ಮಾತನಾಡಿದ ಬಳಿಕ ಮಹಾರಾಷ್ಟ್ರಕ್ಕೆ ಬಸ್ ಬಿಡುವ ಬಗ್ಗೆ ನಿರ್ಧಾರ ಮಾಡುತ್ತೇವೆ. ನಮ್ಮ ಬಸ್‌ಗಳಿಗೆ, ಡ್ರೈವರ್, ಕಂಡಕ್ಟರ್‌ಗಳಿಗೆ ಅವರು ರಕ್ಷಣೆ ಕೊಡಬೇಕು, ಅವರ ಬಸ್‌ಗಳು, ಕಂಡಕ್ಟರ್, ಡ್ರೈವರ್‌ಗಳಿಗೆ ನಾವು ರಕ್ಷಣೆ ಕೊಡ್ತೀವಿ ಎಂದು ಹೇಳಿದರು.ಇದನ್ನೂ ಓದಿ: ಹೈಪರ್‌ಲೂಪ್ ಪರೀಕ್ಷಾರ್ಥ ಹಳಿ ಪೂರ್ಣ – ಭಾರತದಲ್ಲಿ ಕ್ಷಿಪ್ರ ಸಾರಿಗೆ ಕ್ರಾಂತಿಗೆ ಬಲ