ಬೆಳಗಾವಿ : ಸಿಎಂ ಸಿದ್ದರಾಮಯ್ಯ (CM Siddaramaiah) ಸದನಕ್ಕೆ ಸುಳ್ಳು ಹೇಳಿದ್ದಾರೆ. ಇಂತಹ ಸಿಎಂ ನಾನು ನೋಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ (H Vishwanath) ವಿಧಾನ ಪರಿಷತ್ (Vidhan Parishand) ಕಲಾಪದಲ್ಲಿ ವಾಗ್ದಾಳಿ ನಡೆಸಿದ ಘಟನೆ ನಡೆಯಿತು.
ಪ್ರಶ್ನೋತ್ತರ ಅವಧಿ ವೇಳೆ ಗ್ರಂಥಾಲಯಗಳ ಬಗ್ಗೆ ವಿಶ್ವನಾಥ್ ಪ್ರಶ್ನೆ ಕೇಳಿದ್ರು. ಇದಕ್ಕೆ ಸಚಿವ ಮಧು ಬಂಗಾರಪ್ಪ (Madhu Bangarappa) ಉತ್ತರ ನೀಡಿದರು. ಈ ವೇಳೆ ಸಿಎಂ ವಿರುದ್ದ ವಿಶ್ವನಾಥ್ ವಾಗ್ದಾಳಿ ನಡೆಸಿದ್ರು.
Advertisement
Advertisement
ಪಂಚಮಸಾಲಿ ಮೀಸಲಾತಿ ಸಂಬಂಧ ಸಿಎಂ ಸಿದ್ದರಾಮಯ್ಯ ಸದನಕ್ಕೆ ಉತ್ತರ ಕೊಡುವ ವೇಳೆ SCSP-TSP ಗೆ ಇಡೀ ದೇಶದಲ್ಲಿ ಕೇಂದ್ರ ಸರ್ಕಾರ 60 ಸಾವಿರ ಕೋಟಿ ರೂ. ಮಾತ್ರ ಕೊಟ್ಟಿರುವುದು ಅಂತ ಹೇಳಿದ್ರು. ಈ ಮಾತಿಗೆ ವಿಶ್ವನಾಥ್ ಕಿಡಿಕಾರಿದರು. SCSP-TSP ತಾನೇ ದೇಶದಲ್ಲಿ ತಂದಿದ್ದೇನೆ ಅಂತ ಸಿದ್ದರಾಮಯ್ಯ ಬೆನ್ನು ತಟ್ಟಿಕೊಳ್ಳುತ್ತಾರೆ. ಸಿಎಂ ಮೊನ್ನೆ ಉತ್ತರ ಕೊಟ್ಟಿದ್ದು ನೋಡಿದೆ. SCSP-TSP ಹಣ ಸ್ವತಂತ್ರ ಬಂದಾಗಿನಿಂದ ಇದೆ. ಸಿಎಂ ಸಿದ್ದರಾಮಯ್ಯ ಎಷ್ಟು ಸುಳ್ಳು ಹೇಳ್ತಾರೆ ಅಂತ ಕಿಡಿಕಾರಿದರು. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರೋ ಹುದ್ದೆ ಭರ್ತಿಗೆ ಕ್ರಮ: ದಿನೇಶ್ ಗುಂಡೂರಾವ್
Advertisement
ಕೇಂದ್ರದ ಬಜೆಟ್ ಓದದೇ ಇದ್ದರೆ ಇವರು ಇವರು ಎಂತಹ ಮುಖ್ಯಮಂತ್ರಿ. ಸಿಎಂ ಸದನಕ್ಕೆ ಸುಳ್ಳು ಹೇಳಬಾರದು. ಸಿದ್ದರಾಮಯ್ಯ ಸದನದಲ್ಲಿ ಸುಳ್ಳು ಹೇಳಿದ್ದಾರೆ.ಕೇಂದ್ರ ಸರ್ಕಾರ SCSP-TSPಗೆ 2.60 ಲಕ್ಷ ಕೋಟಿ ರೂ. ರಿಲೀಸ್ ಮಾಡಿದೆ. ಇದು ಗೊತ್ತಿಲ್ಲದೆ ಸುಮ್ಮನೆ ಮಾತಾಡೋದು ಎಷ್ಟು ಸರಿ ಅಂತ ಸಿದ್ದರಾಮಯ್ಯ ವಿರುದ್ದ ವಿಶ್ವನಾಥ್ ಕಿಡಿಕಾರಿದರು.