ಮುಂಬೈ: ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ (Maharashtra, Election Results) ವಿಚಾರವಾಗಿ ವಿದ್ಯುನ್ಮಾನ ಮತಯಂತ್ರಗಳ (EVM) ಬಗ್ಗೆ ಪ್ರತಿಪಕ್ಷಗಳ ಆರೋಪದ ನಡುವೆ, ಇವಿಎಂಗಳ ಬಗ್ಗೆ ಆಧಾರರಹಿತ ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿದೆ.
ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ನೀಡಿದ ದೂರಿನ ಮೇರೆಗೆ, ಮುಂಬೈ ಸೈಬರ್ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಇವಿಎಂಗಳ ಬಗ್ಗೆ ಸುಳ್ಳು ಮಾಹಿತಿ ಹರಡುವ ಯಾರೇ ಆದರೂ ಕಠಿಣ ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಸಿದೆ ಎಂದು ವರದಿಯಾಗಿದೆ.
Advertisement
False Claim Regarding EVM: A video was shared by some Social media users where a person is making false, baseless and unsubstantiated claims to hack and tamper EVMs inMaharashtra elections by isolation of EVM frequency. (https://t.co/FZ6YX6GORU)
Clarification: @ECISVEEP pic.twitter.com/OuJl33ekco
— ChiefElectoralOffice (@CEO_Maharashtra) December 1, 2024
Advertisement
ವಿಡಿಯೋದಲ್ಲಿ ವ್ಯಕ್ತಿ, ಇವಿಎಂಗಳನ್ನು ಹ್ಯಾಕ್ ಮಾಡಬಹುದು. ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆಧಾರರಹಿತ ಆರೋಪ ಮಾಡಿದ್ದಾನೆ. ಇದನ್ನು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಸಂಬಂಧ, ಮಹಾರಾಷ್ಟ್ರದ ಸಿಇಒ ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ 318/4, IT ಕಾಯಿದೆಯ ಸೆಕ್ಷನ್ 43 (g) ಮತ್ತು 66 (d) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಇವಿಎಂ ವೈ-ಫೈ, ಬ್ಲೂಟೂತ್ ಹಾಗೂ ಯಾವುದೇ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗದ ಯಂತ್ರವಾಗಿದೆ. ಆದ್ದರಿಂದ, ಇವಿಎಂಗಳನ್ನು ಮ್ಯಾನಿಪುಲೇಟ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇವಿಎಂಗಳು ಸಂಪೂರ್ಣವಾಗಿ ಟ್ಯಾಂಪರ್-ಪ್ರೂಫ್ ಆಗಿವೆ. ಸುಪ್ರೀಂ ಕೋರ್ಟ್ ಹಲವಾರು ಸಂದರ್ಭಗಳಲ್ಲಿ ಇವಿಎಂಗಳ ಮೇಲಿನ ನಂಬಿಕೆ ಬಗ್ಗೆ ಹೇಳಿದೆ. ಅಲ್ಲದೇ ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಅನುಮಾನಗಳನ್ನು ನಿವಾರಿಸಲು ತನ್ನ ವೆಬ್‌ಸೈಟ್‌ನಲ್ಲಿ ವಿವರವಾದ ವರದಿಗಳನ್ನು ಪ್ರಕಟಿಸಿದೆ ಎಂದು ಸಿಇಒ ಕಚೇರಿ ತಿಳಿಸಿದೆ.
2019ರಲ್ಲೂ ಇದೇ ರೀತಿಯ ಪ್ರಕರಣದಲ್ಲಿ ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಬೇರೆ ದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.